Select Page

Advertisement

40 ವರ್ಷ ದೇಶ ಸೇವೆಯಿಂದ ನಿವೃತ್ತಿ ಹೊಂದಿದ ಯೋಧನಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ

40 ವರ್ಷ ದೇಶ ಸೇವೆಯಿಂದ ನಿವೃತ್ತಿ ಹೊಂದಿದ ಯೋಧನಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸ್ವಾಗತ

ಸಂಕೇಶ್ವರ : ಕಳೆದ 40 ವರ್ಷಗಳಿಂದ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ದೇಶ ಸೇವೆ ಮಾಡಿ ಸೇವಾ ನಿವೃತ್ತಿ ಹೊಂದಿದ ಯೋಧ ಕೆಂಪಣ್ಣ ಭೀಮಪ್ಪ ತಳವಾರ ಇವರಿಗೆ ಹುಕ್ಕೇರಿ ತಾಲೂಕಿನ ಸ್ವಗ್ರಾಮ ಹಂಚಿನಾಳಕ್ಕೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.

ಕಳೆದ 40 ವರ್ಷದ ಹಿಂದೆ ಗಡಿ ಭದ್ರತಾ ಪಡೆಯಲ್ಲಿ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಯೋಧನಾಗಿ, ಎಸ್ ಐ ಆಗಿ, ಇನ್ಸ್ಪೆಕ್ಟರ್ ಆಗಿ ದೇಶ ಸೇವೆ ಸಲ್ಲಿಸಿದ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದ ಯೋಧ ಕೆಂಪಣ್ಣ ಭೀಮಪ್ಪ ತಳವಾರ ಇವರು ಸೇವಾ ನಿವೃತ್ತಿ ಹೊಂದಿ ಶನಿವಾರ ಸ್ವಗ್ರಾಮ ಹಂಚಿನಾಳಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಕುಟುಂಬಸ್ಥರು ಸೇರಿ ಯೋಧ ಕೆಂಪಣ್ಣ ಅವರಿಗೆ ಅದ್ದೂರಿಯ ಸ್ವಾಗತ ಕೋರಿದರು. ಇದೇ ವೇಳೆ ತೆರೆದ ವಾಹನ ಒಂದರಲ್ಲಿ ಮೆರವಣಿಗೆ ಮೂಲಕ ಹಂಚಿನಾಳ ಗ್ರಾಮದಲ್ಲಿ ಕರೆತಂದು ಗ್ರಾಮದ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿದ್ದ ಹುಕ್ಕೇರಿಯ ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ಆಶಿರ್ವಚನ ನೀಡುತ್ತ, ದೇಶದ ಗಡಿ ಗಟ್ಟಿ ಇದ್ದರೆ ನಾವು ಗಟ್ಟಿ ಇರುತ್ತವೆ ಎನ್ನುವದನ್ನು ನಾವು ಮರಿಯಬಾರದು ಎಂದರು.

40 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಕೆ.ಬಿ.ತಳವಾರ ದೇಶಕ್ಕೋಸ್ಕರ ದೇಶ ಸೇವೆ ಮಾಡಬೇಕು ಎಂಬ ಹಂಬಲ ಇತ್ತು ಎಂದರು. 40 ವರ್ಷ ಸೇವೆ ಮಾಡಲು 20 ವರ್ಷದ ಮಗನ ಕಳಿಸಿಕೊಟ್ಟ ಕೆಂಪಣ್ಣ ತಳವಾರ ತಾಯಿಯ ಹಾಗೂ ಧರ್ಮಪತ್ನಿಯ ತ್ಯಾಗ ಅಮೋಘ ವಾದದ್ದು ಎಂದು ನುಡಿದರು. ಸೇನೆಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಈ ಭಾಗದಲ್ಲಿ ಯೋಧ ಅಂದರೆ ಕೆಂಪಣ್ಣ ತಳವಾರ ಅವರು ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಗುಡಿ ಒಳಗಿನ ದೇವರಿಗೂ ಹಾಗೂ ಗಡಿಯೋಳಗಿನ ಯೋಧನಿಗೆ ವ್ಯತ್ಯಾಸ ಇಲ್ಲ. ಅವರಿಗಾಗಿ ಪ್ರಾಥನೆ, ಪ್ರೇರಣೆ ಮಾಡುವದು ನಮ್ಮ ಕರ್ತವ್ಯ. ನಾವೆಲ್ಲರು ದೇಶ ಕಾಯುವ ಯೋಧರ ಸಲುವಾಗಿ ಪ್ರಾಥನೆ ಮಾಡೊನ ಎಂದು ನುಡಿದರು. ಭಾರತೀಯ ಸೇನೆ ಎಲ್ಲದಕ್ಕು ತಾಕತ್ತು ಬಂದಿದೆ. ಜಗತ್ತಿನಲ್ಲಿ ಬಲಿಷ್ಠ ಐದು ರಾಷ್ಟ್ರಗಳ ಲ್ಲಿ ಬಾರತ‌ ಕೂಡಾ ಒಂದಾಗಿದೆ. ಅದಕ್ಕೆ ಯೋಧರ ತ್ಯಾಗ ಕಾರಣ ಎಂದರು.

ದೇಶ ಸೇವೆ ಮಾಡಿ ಲೇ ಲಡಾಕ್ ತಂಡಿಯೋಳಗೆ ಇದ್ದು, ದೇಶ ಸೇವೆ ಮಾಡುವ ಅವರ ತ್ಯಾಗ ಎಲ್ಲಕಿಂತಲೂ ದೊಡ್ಡದ್ದು. ಭಾತರದ ಧ್ಚಜವು ಗಾಳಿಗೆ ಹಾರತಾ ಇಲ್ಲ, ನಮ್ಮ ದೇಶದ ಸೈನಿಕರ ಉಸಿರಿನಿಂದ ಹಾರತಾ ಇದೆ ಎನ್ನುವದು ನೆನಪಿಡಿ. ಸೇನೆಗೆ ಹೋದರೆ ವಾಪಸ ಬರುವದು ಗ್ಯಾರಂಟಿ ಇರೊಲ್ಲ ಅಂತ ಜೀವನ ಯೋಧರದ್ದಾಗಿದೆ.

ದೇಶ ಕಾಯುವ ಯೋಧರೆಲ್ಲ ಒಂದು ನಿಮಿಷ ಸುಮ್ಮನೆ ಇದ್ದರೆ ನಾವೆಲ್ಲ ಜೀವಂತ ಇಲ್ಲದಂತಾಗುತ್ತದೆ. ನಮ್ಮ ಯೋಧರು ಸತ್ತರು ಅವರನ್ನು ನೋಡಿ ಕಣ್ಣಿರು ಹಾಕದೆ ವೈರಿಯನ್ನು ಹಿಮ್ಮಟ್ಟಿಸುವ ಕಾರ್ಯ ಯೋಧರು ಮಾಡುತ್ತಾರೆ. ಆಪರೇಶನ್ ಸಿಂಧೂರ ವೇಳೆ ದೇಶದ ಹಿರಿಮೆಯನ್ನು ಹೆಚ್ವಿಸಿದ ನಮ್ಮ ಜಿಲ್ಲೆಯ ಸೊಸೆ ಸುಫಿಯಾ ಖೋರೊಸಿ ಅವರನ್ನು ಇದೇ ವೇಳೆ ಕೊಂಡಾಡಿದರು.

ಇದೇ ವೇಳೆ ಯೋಧನ ಧರ್ಮಪತ್ನಿ ಶಶಿಕಲಾ ತಳವಾರ, ಸಹೋದರ ಸಾತಾಪ್ಪ ತಳವಾರ, ಗ್ರಾಮದ ಮುಖಂಡರಾದ ಮಲ್ಲಪ್ಪ ಮುಗಳಿ, ಡಿ.ಎಮ್. ಜಕ್ಕಾಪ್ಪಗೋಳ, ದಸ್ತಗಿರ ಮುಲ್ಲಾ, ಉಪನ್ಯಾಸಕ ಆನಂದ ಪಾಟೀಲ, ಎಸ್.ಎ ಸರಿಕರ, ಎಸ್.ಬಿ. ಶಿಂಗೆ, ಬಿ.ಎಸ್.ಮಾನೆ, ಕಲ್ಲಪ್ಪ ಕಟ್ಟಿ, ಅಲಕಾ ಮಾನೆ, ಪ್ರೀಯಾಂಕ ಕಟಬು, ಹನುಮಂತ ಕಟಬು, ದ್ರೌಪತಿ ಮೇತ್ರಿ, ಅಜಿತ ಕೋಲಕಾರ, ಪೂರ್ಣಿಮಾ ತಳವಾರ, ಸೇರಿದಂತೆ ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಕೋಲಕಾರ ಸ್ವಾಗತ ಗೀತೆ ಹಾಡಿದರು.

Advertisement

Leave a reply

Your email address will not be published. Required fields are marked *

error: Content is protected !!