ಹೆಂಡ್ತಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದವನಿಗೆ ಏನ್ ಮಾಡಿದ್ರು ನಟ ಸಂಜು ಬಸಯ್ಯ…!
ಬೆಳಗಾವಿ : ನಟಿ ಪವಿತ್ರ ಗೌಡ ಗೆ ಅಶ್ಲೀಲ ಮೆಸೇಜ್ ಕಳುಹಿಸಿ ದರ್ಶನ ಕೈಯಲ್ಲಿ ಪ್ರಾಣ ಬಿಟ್ಟ ರೇಣುಕಾಸ್ವಾಮಿ ಪ್ರಕರಣದಂತೆ ಹಾಸ್ಯ ನಟ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿಗೆ ಅಶ್ಲೀಲ ಮೆಸೆಜ್ ಮಾಡಿ ಓರ್ವ ಯುವಕ ಸಿಕ್ಕಿಬಿದ್ದಿದ್ದಾನೆ.
ವಿಜಯನಗರ ಮೂಲದ ಯುವಕ ನಟ ಸಂಜು ಬಸಯ್ಯ ಪತ್ನಿ ಪಲ್ಲವಿ ಅವರ ಇನ್ಸ್ಟ್ರಾಗ್ರಾಮ್ ಗೆ ಅಶ್ಲೀಲ ಸಂದೇಶ ಕಳುಹಿಸಿದ್ದ. ಆದರೆ ನಟ ಸಂಜು ಬಸಯ್ಯ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಯುವಕನಿಗೆ ಕಾನೂನಿನ ಮೂಲಕ ಬುದ್ದಿ ಕಳುಹಿಸಿದ್ದಾರೆ.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಸಂಜು ಬಸಯ್ಯ ದೂರು ದಾಖಲಿಸಿದ್ದರು. ತಕ್ಷಣ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಕರೆಯಿಸಿ ಬುದ್ದಿ ಹೇಳಿದ್ದಾರೆ. ಯುವಕನ ಭವಿಷ್ಯ ಹಾಳಾಗಬಾರದೆಂದು ಕರೆದು ಬುದ್ದಿ ಹೇಳಿ ಕಳುಹಿಸಿದ್ದಾರೆ.
ಇದೇ ರೀತಿಯಲ್ಲಿ ನಟ ದರ್ಶನ್ ಪವಿತ್ರ ಗೌಡ ಪ್ರಕರಣದಲ್ಲಿ ನಡೆದುಕೊಂಡಿದ್ದರೆ ಜೈಲು ಶಿಕ್ಷೆ ಅನುಭವಿಸುವ ಪ್ರಸಂಗ ಬರುತ್ತಿರಲಿಲ್ಲ. ಹಾಸ್ಯ ನಟ ಸಂಜು ಬಸಯ್ಯ ಈ ಪ್ರಕರಣದ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.


