Select Page

Advertisement

ಪೊಲೀಸರಿಗೆ ಊಟ ಬಡಿಸಿದ ಗೃಹ ಸಚಿವರು ; ಐಪಿಎಸ್ ಅಧಿಕಾರಿ ಸಂಜೀವ್ ಪಾಟೀಲ್ ಸಾಥ್

ಪೊಲೀಸರಿಗೆ ಊಟ ಬಡಿಸಿದ ಗೃಹ ಸಚಿವರು ; ಐಪಿಎಸ್ ಅಧಿಕಾರಿ ಸಂಜೀವ್ ಪಾಟೀಲ್ ಸಾಥ್

ಬೆಳಗಾವಿ : ಎಸ್ಪಿ ಫೋನ್ ಇನ್ ಕಾರ್ಯಕ್ರಮದ‌ ಮೂಲಕ ಬೆಳಗಾವಿ ಜನರ ಹೃದಯ ಗೆದ್ದ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಪಾಟೀಲ್ ಅವರು ಗೃಹ ಸಚಿವರ ಡಾ. ಜಿ. ಪರಮೇಶ್ವರ ಜೊತೆಗೂಡಿ ಪೊಲೀಸ್ ಸಿಬ್ಬಂದಿಗಳಿಗೆ ಊಟ ಬಡಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಘಟಕಗಳಿಂದ ಬಂದೋಬಸ್ತ್ ಕರ್ತವ್ಯಕ್ಕೆ ಆಗಮಿಸಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಲ್ಪಿಸಿರುವ ವಸತಿ ಮತ್ತು ಊಟದ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಜೀವ್ ಪಾಟೀಲ್ ಅವರು ಅಧಿಕಾರಿಗಳಿಗೆ ಊಟ ಬಡಸಿ ಸರಳತೆ ಮೆರೆದರು.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಎಡಿಜಿಪಿ ಆರ್.ಹಿತೇಂದ್ರ, ಐಜಿಪಿ ಸಂದೀಪ್ ಪಾಟೀಲ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ಮುಂತಾದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!