Select Page

Advertisement

ಕಾಂಗ್ರೆಸ್ ಕ್ಯಾಲ್ಕುಲೇಟರ್ ಗೆ ಬೆಂಕಿ ಹಚ್ಚಬೇಕು ; ಜೈನ ಸಮಾವೇಶದಲ್ಲಿ ಗುಡುಗಿದ ಸಂಜಯ್ ಪಾಟೀಲ್

ಕಾಂಗ್ರೆಸ್ ಕ್ಯಾಲ್ಕುಲೇಟರ್ ಗೆ ಬೆಂಕಿ ಹಚ್ಚಬೇಕು ; ಜೈನ ಸಮಾವೇಶದಲ್ಲಿ ಗುಡುಗಿದ ಸಂಜಯ್ ಪಾಟೀಲ್

ಕಾಗವಾಡ : ಸರಕಾರ ಮಾಡಿರುವ ಜಾತಿಗಣತಿಯಲ್ಲಿ ಜೈನ ಸಮುದಾಯವು ಜಿಲ್ಲೆಯಲ್ಲಿ ಕೇವಲ ಒಂದು ಲಕ್ಷ ಇದೆ ಎಂದು ಹೇಳಿದೆ. ಕೇವಲ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 6 ಲಕ್ಷ ಜೈನರಿದ್ದು, ಕಾಂಗ್ರೆಸ್ ಕ್ಯಾಲ್ಕುಲೇಟರ್ ಗೆ ಬೆಂಕಿ ಹಚ್ಚಬೇಕಾ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಗುಡುಗಿದರು.

ಭಾನುವಾರ ತಾಲೂಕಿನ ಐನಾಪೂರ ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ನಡೆದ ಜೈನ ಸಮಾವೇಶ ಉದ್ದೇಶಿಸಿ ಮಾತನಾಡಿದ ಇವರು. ನಮ್ಮ ಸಮುದಾಯ ನ್ಯಾಯಯುತ ಬೇಡಿಕೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದೆ‌ . ನಮ್ಮ ಸಮಾಜ ಯಾವತ್ತೂ ಬೇಡುವುದಲ್ಲ. ಆದರೆ ಮುಂದಿನ ಭವಿಷ್ಯದ ದೃಷ್ಟಿಯಿಂದ ಸರಕಾರದ ಸೌಲಭ್ಯ ಕೇಳುತ್ತಿದ್ದೇವೆ ಎಂದರು.

108 ಗುಣಧರನಂದಿ ಮುನಿ ಮಹಾರಾಜರ ನೇತೃತ್ವದಲ್ಲಿ ಜೈನ ಸಮುದಾಯ ಹೋರಾಟಕ್ಕೆ ಇಳಿದಿದೆ. ಸರಕಾರ ಕೂಡಲೇ ಸಮುದಾಯದ ಬೇಡಿಕೆ ಈಡೇರಿಸಬೇಕು. ಜೈನ ಸಂತರು ಒಮ್ಮೆ ಮಾತು ಕೊಟ್ಟರೆ ಪ್ರಾಣ ಹೋದರು ವಾಪಸ್ ಪಡೆಯುವುದಿಲ್ಲ. ಮೊದಲಬಾರಿಗೆ ಸಮುದಾಯ ಒಕ್ಕೊರಲಿನಿಂದ ಆಗ್ರಹ ಮಾಡುತ್ತಿದ್ದು, ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹ್ಲೊಟ್, ಶಾಸಕರು, ಜೈನ ಮುನಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!