ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕುವ ದಮ್ಕಿ ; ಸಚಿವ ಸತೀಶ್ ಹೆಸರೇಳಿ ಪುಂಡಾಟ
ರಾಯಬಾಗ : ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಅವಾಜ್ ಹಾಕಿದ್ದಲ್ಲದೆ, ಸಚಿವ ಸತೀಶ್ ಜಾರಕಿಹೊಳಿ ಹೆಸರು ಹೇಳಿ ಪುಂಡಾಟ ಮೆರೆದ ಘಟನೆ ಬೆಳಕಿಗೆ ಬಂದಿದೆ.
ರಸ್ತೆ ಸಂಚಾರಿ ನಿಯಮ ಕುರಿತು ಹೆಲ್ಮೆಟ್ ವಿಚಾರವಾಗಿ ಬೈಕ್ ಹಿಡಿದ ರಾಯಬಾಗ ಪಿಎಸ್ಐ ಶಿವಾನಂದ ಕಾರಜೋಳ ಗೆ ಅವಾಜ್ ಹಾಕಿದ್ದಲ್ಲದೆ, ನಿನ್ನ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಗುಂಡಾ ವರ್ತನೆ ತೋರಿದ್ದಾರೆ.
ವಿನಾಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಎಳೆದು ತಂದಿರುವ ಇವರು ಪಿಎಸ್ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಕುರಿತು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


