ಕೊನೆಗೂ ಬದುಕುಳಿಯದ ವೈಷ್ಣವಿ ; ಅಪಘಾತದಲ್ಲಿ ಬಾಲಕಿ ಸಾವು…!

ರಾಯಬಾಗ: ತಾಲ್ಲೂಕಿನ ಆಳಗವಾಡಿ ಗ್ರಾಮದ ವೈಷ್ಣವಿ ತೇರದಾಳೆ (9) ರಸ್ತೆ ಅಪಘಾತದಿಂದಾಗಿ ಮಂಗಳವಾರ ಮೃತ ಪಟ್ಟಿದ್ದಾಳೆ.
ಶಿಕ್ಷಣ ಸಂಯೋಜಕ ವಿಠ್ಠಲ ತೇರದಾಳೆ ಅವರ ಸುಪುತ್ರಿ ವೈಷ್ಣವಿ ಇತ್ತೀಚೆಗೆ ಅಳಗವಾಡಿ ಗ್ರಾಮದ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.
ಒಂದು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಮಂಗಳವಾರ ಬೆಳಗಾವಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ತಂದೆ, ತಾಯಿ, ಸಹೋದರ, ಅಜ್ಜ, ಅಜ್ಜಿಯನ್ನು ಬಿಟ್ಟು ಅಗಲಿದ್ದಾರೆ.


