Select Page

Advertisement

ಬೆಳಗಾವಿ : ರಂಜಾನ್ ನಮಾಜ್ ವೇಳೆ ಪ್ಯಾಲೆಸ್ತೇನ್ ಗೆ ಜೈಕಾರ

ಬೆಳಗಾವಿ : ರಂಜಾನ್ ನಮಾಜ್ ವೇಳೆ ಪ್ಯಾಲೆಸ್ತೇನ್ ಗೆ ಜೈಕಾರ

ಬೆಳಗಾವಿ : ಪವಿತ್ರ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಮಾಜ್ ವೇಳೆ ಕೆಲ ಮುಸ್ಲಿಂ ಯುವಕರು ಪ್ಯಾಲೆಸ್ತೇನ್ ಗೆ ಜೈಕಾರ ಹಾಕಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಬೆಳಗಾವಿ ನಗರದ ಅಂಜುಮನ್ ಇಸ್ಲಾಂ ಈದ್ಗಾ ಮೈದಾನದಲ್ಲಿ ನಮಾಜ್ ವೇಳೆ ಎಸ್ಡಿಪಿಐ ಕಾರ್ಯಕರ್ತರು ಪ್ಯಾಲೆಸ್ತೇನ್ ಗೆ ಜೈಕಾರ ಹಾಕುವ ಪೋಸ್ಟರ್ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಕ್ಫ್ ಕಾಯ್ದೆ ವಿರೋಧಿಸಿ ನಾಮಫಲಕ ಪ್ರದರ್ಶನ ಮಾಡಲಾಗಿದೆ.

ಇನ್ನೂ ಇದೇ ರೀತಿಯಲ್ಲಿ ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿಯೂ ಘಟನೆ ನಡೆದಿದ್ದು ಸಾಗರದಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ ಕೂಗಿರುವ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ ಕೂಗಿದ್ದ ಎಸ್ಡಿಪಿಐ ಮುಖಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!