Select Page

ಕತ್ತಿ ಗಜಮಾ‌ ಹೇಳಿಕೆ ವಿರುದ್ಧ ಸಿಡಿದೆದ್ದ ಜಾರಕಿಹೊಳಿ ಅಭಿಮಾನಿಗಳು ; ಪ್ರಕರಣ ದಾಖಲು..!

ಕತ್ತಿ ಗಜಮಾ‌ ಹೇಳಿಕೆ ವಿರುದ್ಧ ಸಿಡಿದೆದ್ದ ಜಾರಕಿಹೊಳಿ ಅಭಿಮಾನಿಗಳು ; ಪ್ರಕರಣ ದಾಖಲು..!

ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕೀಳು ಪದಬಳಕೆ ಮಾಡಿ ಆರೋಪ ಮಾಡಿದ್ದ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ಸಾಹುಕಾರ ಅಭಿಮಾನಿಗಳ ಒಕ್ಕೂಟದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಗೋಕಾಕ: ಅನಧೀಕೃತ ಮಾಧ್ಯಮದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಕುರಿತು ಅಪಪ್ರಚಾರ ಮಾಡಿದ್ದು ಅವರ ಮೇಲೆ 20 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಸಾಹುಕಾರ ಅಭಿಮಾನಿಗಳ ಒಕ್ಕೂಟದ ಕಾನೂನು ಸಲಹೆಗಾರರು ಹಾಗೂ ಧಾರವಾಡ ಹೈಕೋರ್ಟನ ನ್ಯಾಯವಾದಿ ರಂಜಿತಾ ರೆಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಪ್ರವಾಸಕ್ಕೆ ಹೋದವೇಳೆ ಅನಧಿಕೃತ ಮಾಧ್ಯಮದಲ್ಲಿ ಹೆಮಂತಕುಮಾರ ಕಂಬಾರ ಎಂಬುವರು ಶಾಸಕರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಅಲ್ಲದೇ ಈ ಹಿಂದೆ 2019ರಲ್ಲಿ ರಾಜಕಾರಿಣಿಯೋರ್ವರಿಗೆ ಆಡಿಯೋ ಕಾಲ್ ರೇಕಾರ್ಡಿಂಗ್ ಬ್ಯಾಕ್ ಮೇಲ್ ಮಾಡಿ ತಮ್ಮ ನ್ಯೂಜ್ ಚಾನೇಲ್ ಪರವಾಣಿಗೆ ರದ್ದುಗೊಳಿಸಿಕೊಂಡಿದ್ದು ಇದೆ. ಜೈಲಿಗೂ ಹೋಗಿ ಬಂದಿದ್ದಾರೆ. ಜಾರಕಿಹೊಳಿ ಸಹೋದರರ ಅಭಿಮಾನಿ ಬಳಗದಿಂದ ಅವರ ವಿಳಾಸ ಪತ್ತೆ ಹಚ್ಚಿದ್ದು 20ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಂತೆ ವಿಡಿಯೋ ಬಿತ್ತರಿಸುವದು. ಹಳೆಯ ವಿಡಿಯೋ ಬಳಸಿ ಸಚಿವ ಸತೀಶ ಜಾರಕಿಹೊಳಿ ಬಗ್ಗೆ ಶಾಸಕ ರಮೇಶ ಜಾರಕಿಹೊಳ ಅವರು ಅಧಿಕೃತವಾಗಿ ಮಾಧ್ಯಮಗಳ ಮುಂದೆ ನೀಡಲಾದ ಹೇಳಿಕೆಗಳನ್ನು ರಾಜಕೀಯಕ್ಕಾಗಿ ಎಡಿಟ್ ಮಾಡಿ ಬಳಸಿ ಜಾರಕಿಹೊಳಿ ಸಹೋದರರ ತೆಜೋವಧೆ ಮಾಡಲಾಗುತ್ತಿದೆ. ಇದರ ಹಿಂದೆ ಇರುವವರು ಮತ್ತು ಇದನ್ನು ಮಾಧ್ಯಮಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿಕೊಳ್ಳುತ್ತಿರುವವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ಕಿರಣ ಡಮಾಮಗರ ಮಾತನಾಡಿ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಂತರ ಇಂತಹ ಅಪಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಕಳೆದ ಕೆಲ ದಿನಗಳ ಹಿಂದೆ ರಮೇಶ ಕತ್ತಿಯವರು ಅಶ್ಲೀಲ ಪದ ಬಳಕೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ತೆಜೋವಧೆ ಮಾಡಲು ಪ್ರಯತ್ನಿಸುತ್ತಿದ್ದು ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗಿದೆ. ಸಾಮಾಜಿಕ ಮಾಧ್ಯಮವನ್ನು ಮಹಿಳೆಯರು ಬಳಕೆ ಮಾಡುತ್ತಾರೆ ಎಂಬುದು ಅರಿವಿಲ್ಲದೆ ಹೇಳಿಕೆ ನೀಡಿದ ರಮೇಶ ಕತ್ತಿಯವರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಿದವರ ವಿರುದ್ಧವು ಕಾನೂನು ಹೋರಾಟ ಮಾಡಲಾಗುವದು.

ಪತ್ರಿಕಾಗೊಷ್ಠಿಯಲ್ಲಿ ಸಾಹುಕಾರ ಅಭಿಮಾನಿಗಳ ಒಕ್ಕೂಟದ ಉಪಾಧ್ಯಕ್ಷ ಸೋಹೇಲ ಜಮಾದಾರ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಕುತ್ಬುದ್ದಿನ ಗೋಕಾಕ, ಅಬ್ಬಾಸ ದೇಸಾಯಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜಾರಿ, ಜಮಾದಾರ ಸೇರಿದಂತೆ ಜನಪ್ರತಿನಿಧಿಗಳು, ಜಾರಕಿಹೊಳಿ ಸಹೋದರರ ಅಭಿಮಾನಿಗಳು ಇದ್ದರು.


Advertisement

Leave a reply

Your email address will not be published. Required fields are marked *

error: Content is protected !!