ಮೂರನೇ ಯುದ್ಧಕ್ಕೆ ಸಜ್ಜಾಗಿದ್ದೇವೆ ; ತಾಲೂಕಿನಿಂದ ಆಚೆ ಹಾಕುತ್ತೇವೆ ; ಸಾಹುಕಾರ್ ಏಟು ಯಾರಿಗೆ…?
ಬೆಳಗಾವಿ : ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆಲ್ಲುವ ಮೂಲಕ ಮೊದಲ ಯುದ್ಧ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಯ ಎರಡನೇ ಯುದ್ಧ ಮಾಡುತ್ತೇವೆ. 2028 ರ ವಿಧಾನಸಭಾ ಚುನಾವಣಾ ಮೂಲಕ ತಾಲೂಕು ಬಿಟ್ಟು ಓಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ತಮ್ಮ ವಿರೋಧಿಗಳಿಗೆ ಮಾಜಿ ಸಂಸದ ರಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ.
ಅಭಿಮಾನಿಗಳಿಂದ ಏರ್ಪಡಿಸಿದ್ದ ಸತ್ಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಇವರು. ವಿದ್ಯುತ್ ಸಂಘದ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಿ ಗೆದ್ದಿದ್ದೇವೆ. ಮುಂಬರುವ ಗ್ರಾಮ ಪಂ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಒಗ್ಗಟ್ಟಿನ ಮೂಲಕ ಗೆಲುವು ಸಾಧಿಸಬೇಕು. ನಂತರ ವಿಧಾನಸಭಾ ಚುನಾವಣೆಯಲ್ಲಿ ವಿರೊಧಿಗಳನ್ನು ತಾಲೂಕಿನಿಂದ ಹೊರ ಹಾಕುವ ಕೆಲಸ ಮಾಡುತ್ತೇವೆ ಎಂದರು.
ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆಜ್ಜೆ ಕಟ್ಟಿ ಡ್ಯಾನ್ಸ್ ಮಾಡುವವರನ್ನು ಜನ ತಿರಸ್ಕರಿಸಿದ್ದಾರೆ. ಮದುವೆಯಾದ ಹೆಂಡತಿ ಗಂಡನ ಸೇವೆ ಮಾಡಿದಂತೆ ನಾವು ಕ್ಷೇತ್ರದ ಜನರ ಸೇವೆ ಮಾಡುತ್ತೇವೆ. ತಾಲೂಕಿನ ಜನ ಒಗ್ಗಟ್ಟಾಗಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕೆಂದು ಕರೆ ನೀಡಿದರು.


