ನಾನು ಯಾರ ಪರವಾಗಿಯೂ ಇಲ್ಲ ; ಶಾಸಕ ರಾಜು ಕಾಗೆ
ಬೆಳಗಾವಿ : ಜಾರಕಿಹೊಳಿ ಕುಟುಂಬದಿಂದ ಲಾಭ ಪಡೆದು ಲಕ್ಷ್ಮಣ ಸವದಿ ಪರ ಬ್ಯಾಟ್ ಮಾಡುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರ ಬಣದಲ್ಲಿ ಇಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತಮಾಡಿದ ಇವರು. ನಾನು ಮೊದಲಿನಿಂದಲೂ ಯಾರ ಪರವಾಗಿಯೂ ಇಲ್ಲ. ಸರಿ ಇದ್ದರೆ ಸರಿ ಎನ್ನುತ್ತೇವೆ. ತಪ್ಪು ಇದ್ದರೆ ನೇರವಾಗಿ ತಪ್ಪು ಎಂದು ಹೇಳುತ್ತೇವೆ ಹೊರತು ಒಬ್ಬರ ಮಾತು ಇನ್ನೊಬ್ಬರಿಗೆ ಹೇಳುವ ವ್ಯಕ್ತಿ ನಾನಲ್ಲ ಎಂದರು.
ಅಥಣಿ ಡಿಸಿಸಿ ಬ್ಯಾಂಕ್ ಮ್ಯಾನೆಂಜರ್ ವರ್ಗಾವಣೆ ವಿಚಾರವಾಗಿ ರೈತರು ನನ್ನ ಭೇಟಿಗೆ ಬಂದಾಗ ಕೆಲ ರಾಜಕೀಯ ಬೆಳವಣಿಗೆ ಹೇಳಿದ್ದೇನೆ ಹೊರತು ಯಾರ ಪರವಾಗಿ ಮಾತನಾಡಿಲ್ಲ. ಆದರೆ ನಮ್ಮ ಮಾತಿಗೆ ಬೇರೆ ಅರ್ಥ ಕಲ್ಪಿಸುವ ಕೆಲಸ ನಡೆದಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಉಪಾಧ್ಯಕ್ಷ ಹುದ್ದೆ ಯಾಕೆ ಪಡೆದೆ ಎಂದು ಈಗ ಅನಿಸುತ್ತಿದೆ. ಒಳ ರಾಜಕಾರಣ ಹಾಗೂ ರಾಜಕೀಯ ಆರೋಪ ಪ್ರತ್ಯಾರೋಪ ಬೇಸರ ತರಿಸಿದೆ ಎಂದು ರಾಜು ಕಾಗೆ ಹೇಳಿದರು.


