ಅವಿರೋಧ ಆಯ್ಕೆ ನನಗೇ ಅರ್ಥವಾಗಿಲ್ಲ ; ನೋವು ಹೊರಹಾಕಿದ ರಾಜು ಕಾಗೆ
ಬೆಳಗಾವಿ : ಲಕ್ಷ್ಮಣ ಸವದಿ ಅವರನ್ನು ಬಿಟ್ಟು ನನ್ನನ್ನು ಮಾತ್ರ ಅವಿರೋಧವಾಗಿ ಆಯ್ಕೆ ಮಾಡಿದ್ದು ಅದೇ ಅರ್ಥವಾಗಿಲ್ಲ. ರಾಜಕಾರಣ ಒಂದು ರೀತಿ ಸಾಗುತ್ತಿದ್ದು ಏನು ಮಾಡಲು ಸಾಧ್ಯವಿಲ್ಲ ಎಂದು ಕಾಗವಾಡ ಶಾಸರ ರಾಜು ಕಾಗೆ ನೋವು ಹೊರಹಾಕಿದರು.
ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ನಾನು ಒಬ್ಬನೇ ಅವಿರೋಧ ಆಯ್ಕೆಗೊಂಡು ಅಥಣಿಯಲ್ಲಿ ಲಕ್ಷ್ಮಣ ಸವದಿ ಚುನಾವಣೆ ಎದುರಿಸುವುದು ನೋವು ತರಿಸಿದೆ. ಸವದಿ ಪರವಾಗಿ ನಾನು ಮನವಿ ಮಾಡಿಕೊಂಡರೂ ಅದು ಸಾಧ್ಯವಾಗಲಿಲ್ಲ. ಏನೇ ಆದರೂ ನಮ್ಮಿಬ್ಬರ ಸ್ನೇಹಕ್ಕೆ ಚ್ಯುತಿ ಬರುವುದಿಲ್ಲ ಎಂದರು.
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಿಲ್ಲ ಮುಂದೆ ಲಕ್ಷ್ಮಣ ಸವದಿ ಮತ್ತು ಜಾರಕಿಹೊಳಿ ಒಂದಾಗಬಹುದು. ಸಚಿವ ಸತೀಶ್ ಜಾರಕಿಹೊಳಿ ಮಾತಿಗೆ ಗೌರವ ಕೊಟ್ಟು ಪ್ರತಿಸ್ಪರ್ಧಿ ಶ್ರೀನಿವಾಸ ಪಾಟೀಲ ನಾಮಪತ್ರ ವಾಪಸ್ ಪಡೆದ ಕಾರಣಕ್ಕೆ ಅವಿರೋಧ ಆಯ್ಕೆ ಸಾಧ್ಯವಾಗಿದೆ ಎಂದರು.


