Select Page

Advertisement

ಆಪ್ತ ಸ್ನೇಹಿತನ ಪುತ್ರಿ ನಿಧನ ; ಲಕ್ಷ್ಮಣ ಸವದಿ ಭಾವುಕ

ಆಪ್ತ ಸ್ನೇಹಿತನ ಪುತ್ರಿ ನಿಧನ ; ಲಕ್ಷ್ಮಣ ಸವದಿ ಭಾವುಕ

ಕಾಗವಾಡ : ಹಿರಿಯ ರಾಜಕಾರಣಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ನಿಧನರಾಗಿದ್ದು, ಭಾನುವಾರ ಸ್ವಗ್ರಾಮ ಉಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.

ಶಾಸಕ ರಾಜು ಕಾಗೆ ಜೇಷ್ಠ ಪುತ್ರಿ ಕೃತಿಕಾ ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಿಸದೆ ನಿನ್ನೆ ಮದ್ಯಾನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಭಾನುವಾರ ಬೆಳಿಗ್ಗೆ 6 ಗಂಟೆಗೆ ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ಶಾಸಕ ರಾಜು ಕಾಗೆ ಸ್ವ ಗೃಹದಲ್ಲಿ  ಅಂತಿಮ ನಮನಕ್ಕೆ ಏರ್ಪಾಡು  ಮಾಡಲಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಸ್ವಾಮೀಜಿಗಳು ಅಪಾರ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಆಪ್ತ ಸ್ನೇಹಿತನ ಮಗಳ ಸಾವಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾವುಕ‌ ನುಡಿಗಳನ್ನಾಡಿದ್ದು, ಸಾವಿನ ನೋವು ಭರಿಸುವ ಶಕ್ತಿ ಭಗವಂತ ಆ ಕುಟಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು.

Advertisement

Leave a reply

Your email address will not be published. Required fields are marked *

error: Content is protected !!