ಸೊಂಪಾಗಿ ಸುರಿದಿದ್ದು ಸಂತೋಷ ಮಳೆರಾಯ…!
ಬೆಳಗಾವಿ : ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ತಂಪೆರೆಯಿತು.
ಶುಕ್ರವಾರ ಬೆಳಗ್ಗೆಯಿಂದ ಬಿಸಿಲಿನ ತಾಪ ತೀವ್ರವಾಗಿತ್ತು. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಏಕಾಏಕಿ ಸುರಿದ ಮಳೆಗೆ ಗುಡುಗು ಸಿಡಿಲಿನಿಂದ ಜನತೆಗೆ ತಂಪೆರೆಯಿತು.
ತುಂತುರು ಮಳೆಯಲ್ಲಿಯೇ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿತ್ತು.


