ಸೋನಿಯಾ ಗಾಂಧಿಗೆ ನಾಯಿಮರಿ ಗಿಫ್ಟ್ ಕೊಟ್ಟ ರಾಹುಲ್ ಗಾಂಧಿ ; ತಾಯಿ ಭಾವುಕ
ನವದೆಹಲಿ : ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ( Sonia Gandhi ) ಅವರಿಗೆ ಅವರ ಪುತ್ರ ರಾಹುಲ್ ಗಾಂಧಿ ( Rahul Gandhi ) ನಾಯಿಮರಿ ಗಿಫ್ಟ್ ನೀಡಿದ್ದು, ಮಗನ ಉಡುಗೊರೆಗೆ ತಾಯಿ ಭಾವುಕರಾಗಿದ್ದಾರೆ.
ರಾಹುಲ್ ಗಾಂಧಿ ಇತ್ತೀಚೆಗೆ ಗೋವಾ ಪ್ರವಾಸ ಮಾಡಿದ್ದರು. ಈ ಸಂದರ್ಭದಲ್ಲಿ ಗೋವಾದಿಂದ ವಿಶೇಷ ತಳಿಯ ನಾಯಿ ಮರಿಯನ್ನು ತಂದು ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಧ್ಯ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.
ವಿಶ್ವ ಪ್ರಾಣಿಗಳ ದಿನದ ಅಂಗವಾಗಿ ರಾಹುಲ್ ಗಾಂಧಿ ತಮ್ಮ ಕುಟುಂಬಕ್ಕೆ ಹೊಸ ಪ್ರಾಣಿ ಬರಮಾಡಿಕೊಂಡಿದ್ದಾರೆ. ಗೋವಾದಿಂದ ವಿಶೇಷ ತಳಿಯ ನಾಯಿಯನ್ನು ದೆಹಲಿಗೆ ತಂದಿದ್ದಾರೆ.
ಇದು ಜಾಕ್ ರಸೆಲ್ ಟರಿಯರ್ ನಾಯಿ ತಳಿ ಬೆಳೆಸುವ ಗೋವಾದ ಶರ್ವಣಿ ಹಾಗೂ ಸ್ಟಾನ್ಲಿ ದಂಪತಿಗಳಿಂದ ಸುಂದರ ನಾಯಿಯನ್ನು ರಾಹುಲ್ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ಅವರ ಮನೆಗೂ ಭೇಟಿ ನೀಡಿದ್ದರು.


