ಲಡಾಖ್ ಗೆ ರಾಹುಲ್ ಗಾಂಧಿ ಬೈಕ್ ರೈಡ್ ; ಗಮನಸೆಳೆದ ಚಿತ್ರಗಳು
ಲಡಾಖ್ : ಆರ್ಟಿಕಲ್ 370 ರದ್ದಾದ ನಂತರದಲ್ಲಿ ಲಡಾಖ್ ಪ್ರದೇಶದ ಪ್ಯಾಂಗಾಂಗ್ ಸರೋವರಕ್ಕೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮೊದಲಬಾರಿಗೆ ಬೈಕ್ ರೈಡ್ ಮೂಲಕ ತೆರಳುಥತಿದ್ದು, ಈ ಕುರಿತು ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೌದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ ಆಚರಣೆ ಅಂಗವಾಗಿ ಅವರ ಮಗ ರಾಹುಲ್ ಗಾಂಧಿ ಶನಿವಾರ ಲಡಾಖ್ ನಿಂದ ಪ್ಯಾಂಗಾಂಗ್ ಸರೋವರದ ಬೈಕ್ ನಲ್ಲಿ ತೆರಳಿ ಗಮನಸೆಳೆದಿದ್ದಾರೆ.
ಕೆಟಿಎಂ 900 ಅಡ್ವೆಂಚರ್ ಬೈಕ್ ನಲ್ಲಿ ರಾಹುಲ್ ಗಾಂಧಿ ತೆರಳಿದ್ದಾರೆ. ಜಗತ್ತಿನ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದು ಎಂದು ನನ್ನ ತಂದೆ ಹೇಳುತ್ತಿದ್ದ ಪ್ಯಾಂಗಾಂಗ್ ಸರೋವರಕ್ಕೆ ತೆರಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


