ಇಂಜೆಕ್ಷನ್ ನಿಂದ ಜಸ್ಟ್ ಮಿಸ್ ಆದರಾ ಅಶೋಕ್….? ಇದು ಮುನಿಯ ಖತರ್ನಾಕ್ ಕಹಾನಿ…!
ಬೆಂಗಳೂರು : ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ಇಂಜೆಕ್ಷನ್ ನಿಂದ ಜಸ್ಟ್ ಮಿಸ್ ಆದರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಮ್ಮದೇ ಪಕ್ಷದ ನಾಯಕರ ಖತರ್ನಾಕ್ ಐಡಿಯಾದಿಂದ ಸ್ವಲ್ಪದರಲ್ಲೇ ಮುನಿರತ್ನ ಬಚಾವ್ ಆದರು ಎಂದು ಹೇಳಲಾಗುತ್ತಿದೆ.
ಹೌದು ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಲ್ಲಿ ಜೈಲು ಸೇರಿ ಹೊರಬಂದ ಮರುಕ್ಷಣವೇ ಆರ್.ಆರ್ ನಗರ ಶಾಸಕ ಮುನಿರತ್ನ ಈಗ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸ್ ವಶಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಮುನಿರತ್ನನ ಕರಾಳ ಮುಖಗಳನ್ನು ನೊಂದ ಮಹಿಳೆಯರು ಬಯಲು ಮಾಡುತ್ತಿದ್ದ ಈ ಶಾಸಕನ ಕೆಟ್ಟ ಕೆಲಸಕ್ಕೆ ಜನ ಉಗಿಯುತ್ತಿದ್ದಾರೆ.
ತಮ್ಮ ರಾಜಕೀಯ ವಿರೋಧಿಗಳನ್ನು ಮುಗಿಸಲು ಮುನಿರತ್ನ ಯಾವ ಮಟ್ಟಿಗಾದರು ಇಳಿಯುತ್ತಿದ್ದ ಎಂದು ಹೇಳಲಾಗುತ್ತಿದೆ. ಹೆಚ್,ಐ,ವಿ ಸೋಂಕಿತ ಮಹಿಳೆಯರನ್ನು ಇಟ್ಟುಕೊಂಡು ರಾಜಕೀಯ ನಾಯಕರನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸುವ ಕೆಲಸವನ್ನು ಶಾಸಕ ಮುನಿರತ್ನ ಮಾಡುತ್ತಿದ್ದ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಈ HIV ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ಮುನಿರತ್ನ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಹೆಚ್.ಐ.ವ್ಹಿ ಸೋಕಿತ ರಕ್ತ ಇಂಜೆಕ್ಟ್ ಮಾಡಲು ಯತ್ನ ನಡೆದಿತ್ತು ಆದರೆ ಆರ್ ಅಶೋಕ್ ಅವರ ಅದೃಷ್ಟ. ಈ ನಾಲಾಯಕರ ಬಲೆಗೆ ಬೀಳಲಿಲ್ಲ ಎಂಬ ಸತ್ಯ ಬಯಲಾಗಿದ್ದು ಶಾಸಕ ಮುನಿರತ್ನನ ವಿಕೃತ ಮನಸ್ಥಿತಿ ಎಂತಹದು ಎಂದು ಮಹಿಳೆಯರ ಮಾತಿನಿಂದ ಹೊರಬಂದಿದೆ.
ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರ ಹುಟ್ಟು ಹಬ್ಬದ ದಿನದಂದು ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್ ಮಾಡಲು ಮುನಿರತ್ನ ಅವರು ಪ್ಲ್ಯಾನ್ ಹಾಕಿಕೊಂಡಿದ್ದರು ಎಂದು ಮುನಿರತ್ನ ಅವರ ಆಪ್ತ ಖಾಸಗಿ ವಾಹಿನಿಯಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ.
ಈ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಶಾಸಕ ಮುನಿರತ್ನ ಅವರನ್ನ ನಾವ್ಯಾರೂ ಬೆಂಬಲಿಸಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ತನಿಖೆ ಮಾಡಿದಾಗ ಸತ್ಯಾಸತ್ಯೆತೆ ಹೊರಬರುತ್ತದೆ.
ಆದರೆ, ಈ ತರಹ ಘಟನೆ ರಾಜಕೀಯದಲ್ಲಿ ನಡೆದರೇ ರಾಜಕೀಯದಲ್ಲಿ ಯಾವ ರಾಜಕಾರಣಿಯೂ ಬದುಕುವುದಕ್ಕೆ ಆಗುವುದಿಲ್ಲ. ಯಾವ ಮಂತ್ರಿಯೂ ಕೆಲಸ ಮಾಡಲು ಆಗಲ್ಲ. ಜನರನ್ನ ಹೇಗೆ ನಂಬುವುದು. ಜನರ ಹತ್ತಿರ ನಾವು ಹೋಗಲಿಲ್ಲ ಅಂದ್ರೆ, ಜನ ನಮ್ಮನ್ನ ದೂರ ಮಾಡುತ್ತಾರೆ ಎಂದು ಆರ್ ಅಶೋಕ್ ಬೆಚ್ಚಿಬಿದ್ದಿದ್ದಾರೆ.
ಅತ್ಯಾಚಾರದ ವಿಚಾರ ನಮ್ಮ ಹೈಕಮಾಂಡ್ ಗಮನಕ್ಕೆ ಬಂದಿಲ್ಲ. ತನಿಖೆಯಿಂದ ಎಲ್ಲಾ ತಿಳಿದು ಬರಲಿದೆ. ಭಾರತದ ದೇಶದಲ್ಲಿಯೇ ಈ ತರ ಆಗುತ್ತದೆ ಎಂದರೇ ಭಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಭಯಬೀತಿಯಿಂದ ಹೇಳಿಕೆ ನೀಡಿದ್ದಾರೆ.


