ಗಲಭೆ ತಡೆಯುವಲ್ಲಿ ಯಶಸ್ವಿಯಾದ PSI ಮಹಾಂತೇಶ ಮಠಪತಿ ಅವರಿಗೆ ಕಮಿಷನರ್ ಸನ್ಮಾನ
ಬೆಳಗಾವಿ : ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ನಗರದ ದರ್ಬಾರ್ ಗಲ್ಲಿ ಮತ್ತು ಪೋರ್ಟ್ ರಸ್ತೆಯಲ್ಲಿ ಕಿಡಿಗೇಡಿಗಳು ಗಲಭೆ ಸೃಷ್ಟಿಸಲು ಪ್ರಯತ್ನಿಸಿದಾಗ ಸಮಯಪ್ರಜ್ಞೆ ಮೆರೆದು ಪರಿಸ್ಥಿತಿ ನಿಭಾಯಿಸಿದ್ದ ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತೇಶ ಮಠಪತಿ ಸೇರಿ ಹಲವು ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಎಸ್. ಎನ್ ಸಿದ್ದರಾಮಪ್ಪ ಸನ್ಮಾನಿಸಿದರು.
ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪೊಲೀಸ್ ಪರೇಡ್ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ್ದ ಮಾರ್ಕೆಟ್ ಠಾಣೆ ಪಿಎಸ್ಐ ಮಹಾಂತೇಶ ಮಠಪತಿ, ಆರ್‌ಪಿಐ ವಿಠ್ಠಲ್ ಹಾವನ್ನವರ, ಸಿಬ್ಬಂದಿಗಳಾದ ನವೀನ್ ಕುಮಾರ್ ಎಬಿ, ಮಲ್ಲಿಕಾರ್ಜುನ್ ಗುಂಜಿಕರ್, ನಾಗರಾಜ್ ಭೀಮ್ ಗೌಡ, ಆರ್ ಎಸ್ ಕೋಲ್ಕಾರ್, ಕೆ ಎಸ್ ನಾಗರಾಳೆ ಮನೋಹರ್ ಪಾಟೀಲ್, ಅಸಿರ್ ಜಮಾದಾರ್ ಹಾಗೂ ರಾಜು ಕಡಪಗೊಳ ಅವರಿಗೆ ಸನ್ಮಾನ ನೆರವೇರಿಸಿದರು.
ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬೆಳಗಾವಿ ನಗರದಂತಹ ಸೂಕ್ಷ್ಮ ಪ್ರದೇಶದಲ್ಲಿ ಕಿಡಿಗೇಡಿಗಳು ಗಲಭೆ ಸೃಷ್ಟಿಸಲು ಮುಂದಾಗಿದ್ದರು ಈ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಮಾರ್ಕೆಟ್ ಪೊಲೀಸ್ ಠಾಣೆ ಪಿಎಸ್ಐ ಮಹಾಂತೇಶ ಮಠಪತಿ, ಹಾಗೂ ಉಳಿದ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು.
ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ನಗರ ಪೊಲೀಸ್ ಆಯುಕತ್ತರು. ಸೂಕ್ಷ್ಮ ಸಂದರ್ಭದಲ್ಲಿ ಇಲಾಖೆಯು ಸಿಬ್ಬಂದಿ ಇಡುವ ಪ್ರತಿ ಹೆಜ್ಜೆಯೂ ಮಹತ್ವದ್ದಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮ ಸಿಬ್ಬಂದಿಗಳು ತೋರಿದ ಕೆಲಸ ಮಾದರಿ ಎಂದರು. ಉತ್ತಮ ಕರ್ತವ್ಯ ಮಿರ್ವಹಿಸಿದ ಸಿಬ್ಬಂದಿಗೆ 20 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಡಿಸಿಪಿಗಳಾದ ರೋಹನ್ ಜಗದೀಶ್, ಸ್ನೇಹ ಪಿ.ವಿ ಹಾಗೂ ಎಸಿಪಿಗಳು ಉಪಸ್ಥಿತರಿದ್ದರು.


