ವ್ಯಕ್ತಿ ಮೇಲೆ ಬಿಜೆಪಿ ಮುಖಂಡ ಮೂತ್ರ ವಿಸರ್ಜನೆ : ದೇಶಾದ್ಯಂತ ವ್ಯಾಪಕ ಖಂಡನೆ
ಮಧ್ಯಪ್ರದೇಶ : ಬುಡಕ್ಕಟ್ಟು ಕಾರ್ಮಿಕರೊಬ್ಬರ ಮೇಲೆ ಬಿಜೆಪಿ ಯುವ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಕಾರ್ಮಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ಸಧ್ಯ ಎಲ್ಲೆಡೆ ವೈರಲ್ ಆಗಿದೆ. ಮಧ್ಯಪ್ರದೇಶದ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬಾತ ಈ ಕೃತ್ಯ ಎಸಗಿದ್ದು ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.
ಸಧ್ಯ ಈ ಘಟನೆ ಕುರಿತಾಗಿ ಆರೋಪಿ ಪ್ರವೇಶ್ ಶುಕ್ಲಾ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಧ್ಯ ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಆರೋಪಿ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
ಇನ್ನೂ ಈ ಕುರಿತು ಟ್ವಿಟರ್ ನಲ್ಲಿ #ArrestPraveshShukla ಎಂದು ಅಭಿಯಾನದ ಪ್ರಾರಂಬವಾಗಿದೆ. ಜೊತೆಗೆ ಈ ಘಟನೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಭಟನೆ ವ್ಯಕ್ತವಾಗುವ ಸಾಧ್ಯತೆ ಕೂಡಾ ಇದೆ.


