ಬೆಂಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ‌ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ‌ ರವಿ ಕೆ.ಬಿ ಅವರು ಮೃತಪಟ್ಟಿದ್ದಾರೆ.

ಸೈಬರ್ ಅಪರಾಧ ಪ್ರಕರಣ ತನಿಖೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ್ದ ಪೊಲೀಸ್ ತಂಡ ತನಿಖೆ ನಂತರ ಮರಳಿ ಭೂಪಾಲ್ ನಿಂದ ಇಂದೋರ್ ಗೆ ತೆರಳುವ ವೇಳೆ ಇವರು ಸಂಚರಿಸುತ್ತಿದ್ದ ಬಸ್ ಭೀಕರ ಅಪಘಾತ ಸಂಭವಿಸಿದ್ದು ಚಿಕಿತ್ಸೆ ‌ಫಲಕಾರಿಯಾಗದೆ ಇನ್ಸ್ಪೆಕ್ಟರ್ ಸಾವಿಗೀಡಾಗಿದ್ದಾರೆ.‌

ಘಟನೆಯಲ್ಲಿ ಪಿಎಸ್ಐ ಸೇರಿದಂತೆ ಇತರ ಮೂವರಿಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2007 ರ ಬ್ಯಾಚ್ ಅಧಿಕಾರಿ ಆಗಿದ್ದ ರವಿ ಅವರು ಬೆಂಗಳೂರಿನಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುತ್ತಿದ್ದರು.