ಡಿಜಿಪಿ ರಾಸಲೀಲೆ ಪ್ರಕರಣ ; ವೀಡಿಯೋ ಜೊತೆಗೆ ಎರಡು ಆಡಿಯೋ ವೈರಲ್
ಬೆಂಗಳೂರು : ಪೊಲೀಸ್ ಸಮವಸ್ತ್ರದಲ್ಲಿ ಕಚೇರಿಯಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿರುವ ಡಿಜಿಪಿ ರಾಮಚಂದ್ರರಾವ್ ಅವರದ್ದು ಎನ್ನಲಾದ ವೀಡಿಯೋ ಜೊತೆಗೆ ಎರಡು ಆಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಮವಸ್ತ್ರದಲ್ಲೇ ಕೆಲವು ಮಹಿಳೆಯರ ಜೊತೆ ರಾಮಚಂದ್ರರಾವ್ ಅಸಭ್ಯ ವರ್ತನೆ ಮಾಡಿದ್ದಾರೆ. ಸಧ್ಯ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸರಕಾರಕ್ಕೆ ಮುಜುಗರ ಉಂಟಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ. ಎಷ್ಟೇ ದೊಡ್ಡ ಅಧಿಕಾರಿ ಇದ್ದರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಘಟನೆ ಬೆಳಕಿಗೆ ಬರುತ್ತಿದ್ದಂತೆ ಡಿಜಿಪಿ ಗೃಹ ಸಚಿವರ ಭೇಟಿಗೆ ತೆರಳಿದ್ದರೂ ಆದರೆ ಭೇಟಿಗೆ ಅವಕಾಶ ನೀಡಲಾಗಿಲ್ಲ.


