Select Page

ರಾಮದುರ್ಗದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ, ಸ್ವಾಭಿಮಾನಕ್ಕೆ ಗೆಲುವು ಅಂತಾರೆ ಕ್ಷೇತ್ರದ ಜನ

ರಾಮದುರ್ಗದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ, ಸ್ವಾಭಿಮಾನಕ್ಕೆ ಗೆಲುವು ಅಂತಾರೆ ಕ್ಷೇತ್ರದ ಜನ

“ರಾಮದುರ್ಗದಲ್ಲಿ ಹಗಲಿರುಳು ಸೇವೆ ಮಾಡಿದ್ದ ಮಹಾದೇವಪ್ಪ ಯಾದವಾಡ ಇದ್ದರು. ಜಿಲ್ಲೆಯಲ್ಲೇ ಸಂಘಟನೆ ಮೂಲಕ ಯುವ ನಾಯಕ ರಮೇಶ್ ದೇಶಪಾಂಡೆ ಇದ್ದರು. ಕಾರ್ಯಕರ್ತರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದ ಮಲ್ಲಣ್ಣ ಯಾದವಾಡ ಇದ್ದರು. ಮಹಿಳಾ ಶಕ್ತಿ ಮೂಲಕ ಸಂಘಟನೆ ಮಾಡಿದ್ದ ರೇಖಾ ಚಿನ್ನಾಕಟ್ಟಿ ಇದ್ದರು‌. ಪಂಚಮಸಾಲಿ ಸಮುದಾಯದ ಗಟ್ಟಿ ಧ್ವನಿಯಾದ ಪಿ.ಎಫ್ ಪಾಟೀಲ್ ಹಾಗೂ ವಿಜಯ್ ಗುಡದಾರಿ ಇದ್ದರು.”

ರಾಮದುರ್ಗ : ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಈ ಬಾರಿ ಟಿಕೆಟ್ ನಿರಾಕರಣೆ ಮಾಡಿದ್ದ ಬಿಜೆಪಿ ಹೊಸ ಅಭ್ಯರ್ಥಿ ಚಿಕ್ಕರೇವಣ್ಣ ಎಂಬುವವರಿಗೆ ಟಿಕೆಟ್ ಕೊಡಿವ ಮೂಲಕ ಬಿಜೆಪಿ ಕಾರ್ಯಕರ್ತರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಬಿಜೆಪಿ ಹೈಕಮಾಂಡ್ ಮಾಡಿತ್ತು. ಆದರೆ ಸಧ್ಯ ಬಿಜೆಪಿ ಲೆಕ್ಕಾಚಾರ ತಲೆಕೆಳಗುವಂತೆ ಕಾಣುತ್ತಿದ್ದು ಕುರುಡು ಕಾಂಚಾಣ ಕುಣಿಸುತ್ತಿರುವ ವ್ಯಕ್ತಿಯನ್ನು ಸೋಲಿಸಿ ಸ್ವಾಭಿಮಾನದ ಗೆಲುವು ಪಡೆಯಬೇಕು ಎಂಬ ಮಾತು ರಾಮದುರ್ಗ ಕ್ಷೇತ್ರದಲ್ಲಿ  ಕೇಳಿ ಬರುತ್ತಿದೆ.

ಹೌದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಚಿಕ್ಕರೇವಣ್ಣ ಎಂಬ ಉದ್ಯಮಿ ಕೊನೆ ಕ್ಷಣದ ವರೆಗೂ ಹೋರಾಟ ನಡೆಸಿದರು. ಆದರೆ ಅಲ್ಲಿ ಟಿಕೆಟ್ ದೊರೆಯಲಿಲ್ಲ. ಅದಾದ ನಂತರವೇ ಬಿಜೆಪಿ ಕೈ ಹಿಡಿದ ಇವರು ಪಕ್ಷ ಸೇರೊದ್ದ ನಾಲ್ಕು ದಿನಗಳಲ್ಲಿ ರಾಮದುರ್ಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಈ ಎಲ್ಲಾ ಬೆಳವಣಿಗೆಯಿಂದ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಕುಗ್ಗಿ ಹೋಗಿದ್ದು ಮಾತ್ರವಲ್ಲದೆ, ಹೊರಗಿನವರಿಗೆ ಟಿಕೆಟ್ ಕೊಟ್ಟ ಅಸಮಾಧಾನ ಕೂಡಾ ಹೊಂದಿದ್ದು ಸುಳ್ಳಲ್ಲ.

ಇನ್ನೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮಾತ್ರ ಪಕ್ಷದ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದ್ದು ಈವರೆಗೂ ಮುಂದುವರಿದಿದೆ. ರಾಮದುರ್ಗದಲ್ಲಿ ನಿರಂತರ ಸಂಘಟನೆ ಮಾಡಿಕೊಂಡು ಬಂದಿದ್ದ ಅನೇಕರಿಗೆ ಟಿಕೆಟ್ ಕೊಡದೆ ಹೊರಗಿನವರಿಗೆ ಟಿಕೆಟ್ ಕೊಡಲಾಗಿದೆ ಎಂಬ ಅಪಸ್ವರ ಸಾಮಾನ್ಯವಾಗಿ ಎದ್ದಿದೆ. ಇದು ಬರುವ ಚುನಾವಣೆಯಲ್ಲಿ ಬಿಜೆಪಿ ಮೇಲೆ ಗಂಭೀರ ಪರಿಣಾಮ ಬೀರುವುದು ಸ್ಪಷ್ಟ.

ಚಿಕ್ಕರೇವಣ್ಣ ಸ್ಪರ್ಧೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ಸ್ವಾಭಿಮಾನದ ಗೆಲುವು ಆಗಬೇಕು ಎಂಬ ಆಶಯ ಹೊರ ಹಾಕುತ್ತಿದ್ದು, ಇದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ ಅವರಿಗೆ ಲಾಭವಾಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿ ದ್ರೋಹ ಮಾಡಿದೆ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದ್ದು, ಇದು ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

ಒಂದು ವೇಳೆ ಪಕ್ಷ ಟಿಕೆಟ್ ಬದಲಾವಣೆ ಮಾಡಿದ್ದರೆ ಅದಕ್ಕೆ ಇನ್ನೂ ಹಲವು ಜನ ಆಕಾಂಕ್ಷಿಗಳು ಇದ್ದರು. ಅವರನ್ನಾದರು ಪಕ್ಷ ಗುರುತಿಸಬೇಕಿತ್ತು. “ರಾಮದುರ್ಗದಲ್ಲಿ ಹಗಲಿರುಳು ಸೇವೆ ಮಾಡಿದ್ದ ಮಹಾದೇವಪ್ಪ ಯಾದವಾಡ ಇದ್ದರು. ಜಿಲ್ಲೆಯಲ್ಲೇ ಸಂಘಟನೆ ಮೂಲಕ ಯುವ ನಾಯಕ ರಮೇಶ್ ದೇಶಪಾಂಡೆ ಇದ್ದರು. ಕಾರ್ಯಕರ್ತರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದ ಮಲ್ಲಣ್ಣ ಯಾದವಾಡ ಇದ್ದರು. ಮಹಿಳಾ ಶಕ್ತಿ ಮೂಲಕ ಸಂಘಟನೆ ಮಾಡಿದ್ದ ರೇಖಾ ಚಿನ್ನಾಕಟ್ಟಿ ಇದ್ದರು‌. ಪಂಚಮಸಾಲಿ ಸಮುದಾಯದ ಗಟ್ಟಿ ಧ್ವನಿಯಾದ ಪಿ.ಎಫ್ ಪಾಟೀಲ್ ಹಾಗೂ ವಿಜಯ್ ಗುಡದಾರಿ ಇದ್ದರು.”ಆದರೆ ಬಿಜೆಪಿ ಹೈಕಮಾಂಡ್ ಹೊರಗಿನವರನ್ನು ಅಭ್ಯರ್ಥಿ ಮಾಡಿದ್ದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಒಡೆದ ಮನೆಯಾದ ಬಿಜೆಪಿ ; ಗೆಲುವಿನ ನಿರೀಕ್ಷೆಯಲ್ಲಿ ಅಶೋಕ್ ಪಟ್ಟಣ : ಹೌದು ಸಂಘಟನಾತ್ಮಕವಾಗಿ ಗಟ್ಟಿಯಾಗಿದ್ದ ರಾಮದುರ್ಗದಲ್ಲಿ ಬಿಜೆಪಿ ಟಿಕೆಟ್ ಬದಲಾವಣೆ ಹೊಡೆತ ಕೊಡುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಹಣವಂತರಾಗಿದ್ದರು, ಜನ ಸ್ಥಳೀಯ ನಾಯಕತ್ವದ ಮಹತ್ವ ಗಟ್ಟಿಯಾಗಿ ಹೇಳುತ್ತಿದ್ದಾರೆ. ಇದರಿಂದ ಬಿಜೆಪಿ ಮತಗಳು ಕಾಂಗ್ರೆಸ್ ಕಡೆಗೆ ವಾಲುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!