Select Page

Advertisement

ಸಂಸತ್ ದಾಳಿಗೂ ಬಾಗಲಕೋಟೆ ನಂಟು..? ನಿವೃತ್ತ DYSP ಪುತ್ರನ ವಿಚಾರಣೆ

ಸಂಸತ್ ದಾಳಿಗೂ ಬಾಗಲಕೋಟೆ ನಂಟು..? ನಿವೃತ್ತ DYSP ಪುತ್ರನ ವಿಚಾರಣೆ

ನವದೆಹಲಿ : ಕಳೆದ ವಾರ ಸಂಸತ್ತಿನನಲ್ಲಿ ನಡೆದ ದಾಳಿಗೂ ಹಾಗೂ ಕರ್ನಾಟಕದ ಬಾಗಲಕೋಟೆ ಜಿಲ್ಲೆಗೂ ನಂಟಿದೆಯಾ ಎಂಬ ಅನುಮಾನ ಮೂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ಪಿ ಪುತ್ರನನ್ನು NIA ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ನವದೆಹಲಿಯಿಂದ ಬಾಗಲಕೋಟೆಗೆ ಆಗಮಿಸಿರುವ NIA ತಂಡ ಬಾಗಲಕೋಟೆ ನಗರದ ವಿದ್ಯಾನಗರದಲ್ಲಿರುವ ಮಾಜಿ ಡಿವೈಎಸ್ಪಿ ಅಧಿಕಾರಿ ಮಗನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ದೇಹಲಿ ಸಂಸತ್ ಭವನದ ದಾಳಿ ಆರೋಪಿ ಮೈಸೂರು ಮೂಲದ ನಿರಂಜನ್ ಎಂಬಾತ ಹಾಗೂ ಬಾಗಲಕೋಟೆ ಮೂಲದ ಸಾಯಿಕೃಷ್ಣ ಜಗಲಿ ಎಂಬಾತನಿಗೆ ಹಳೆಯ ಸ್ನೇಹವಿತ್ತು ಎಂದು ತಿಳಿದುಬಂದಿದೆ. ಆರೋಪಿತನ ಜೊತೆ ಬಾಗಲಕೋಟೆ ಹುಡುಗ ಸಂಪರ್ಕ ಹೊಂದಿದ್ದ ಎಂಬುದು ತಿಳಿದುಬಂದಿದೆ.

ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಯುವಕ ಸಾಯಿಕೃಷ್ಣನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಯುವಕ ಸಾಯಿಕೃಷ್ಣ ನಿರಂಜನ್ ರೂಮ್ ಮೇಟ್ ಆಗಿದ್ದ ಎಂಬುದು ತಿಳಿದುಬಂದಿದೆ.

Advertisement

Leave a reply

Your email address will not be published. Required fields are marked *

error: Content is protected !!