Select Page

Advertisement

ಪಿ.ರಾಜೀವ್ ಗೆ ಮುಳುವಾಯ್ತು ಜಂಗಮರ ವಿರೋಧ

ಪಿ.ರಾಜೀವ್ ಗೆ ಮುಳುವಾಯ್ತು ಜಂಗಮರ ವಿರೋಧ

ಬೆಳಗಾವಿ : ಜಂಗಮ‌‌ ಸಮುದಾಯಕ್ಕೆ ಸಾಂವಿಧಾನಿಕ ಮೀಸಲಾತಿ ಕೊಡುವಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದ್ದಂತೆ ಸಧನದ ಹೊರಗೆ ಹಾಗೂ ಒಳಗೆ ವಿರೋಧ ವ್ಯಕ್ತಪಡಿಸಿದ್ದ ಕುಡಚಿ ಶಾಸಕ ಪಿ. ರಾಜೀವ್ ಅವರ ಸೋಲಿಗೆ ಜಂಗಮ ಸಮುದಾಯದ ವಿರೋಧವು ಕಾರಣವಾಯಿತು.

ಕುಡಚಿ ಕ್ಷೇತ್ರದಲ್ಲಿ ಸುಮಾರು ಹನ್ನೆರಡು ಸಾವಿರ ಜಂಗಮ‌ ಮತಗಳಿದ್ದು ಈ ಬಾರಿ ಪಿ. ರಾಜೀವ್ ಅವರಿಗೆ ಮತ ಮೀಡದಂತೆ ಮನೆ ಮನೆಗೆ ತೆರಳಿ ಕರಪತ್ರ ಹಂಚಲಾಗಿತ್ತು. ಈ ಹಿಂದೆ ಬಿಜೆಪಿ ಪರವಾಗಿದ್ದ ಜಂಗಮ‌ ಮತಗಳು ಒಗ್ಗಟ್ಟಿನಿಂದ ರಾಜೀವ್ ವಿರುದ್ಧ ಸೇಡು ತೀರಿಸಿಕೊಂಡ ಪರಿಣಾಮ ಇವರ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ಮಾಡಿದ್ದ ಜಂಗಮ ಸಮುದಾಯಕ್ಕೆ ಶಾಸಕ ಪಿ. ರಾಜೀವ್ ವಿರೋಧ ವ್ಯಕ್ತಪಸುತ್ತ ಬಂದಿದ್ದರು. ಜೊತೆಗೆ ಸದನದ ಒಳಗೆ ಹಾಗೂ ಹೊರಗೆ ಜಂಗಮ‌‌ ಸಮುದಾಯಕ್ಕೆ ಸಾಂವಿಧಾನಿಕ ಎಸ್ಸಿ ಮೀಸಲಾತಿ ಕೊಡುವ ವಿಚಾರವಾಗಿ ರಾಜೀವ್ ಅಪಸ್ವರ ಎತ್ತಿದ್ದ ಕಾರಣ ಜಂಗಮ ಸಮುದಾಯ ಆಕ್ರೋಶ ಹೊಂದಿದ್ದು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದೆ.

ಇನ್ನೂ ಸಚಿವ ಗೋವಿಂದ ಕಾರಜೋಳ ಕೂಡಾ ಜಂಗಮ ವಿರೋಧಿ‌ ನಡೆ ಹೊಂದಿದ್ದ ಕಾರಣ ಅವರ ಸೋಲಿಗು ಜಂಗಮರ ಆಕ್ರೋಶ ಕೂಡಾ ಕಾರವಾಗಿದೆ. ಪ್ರತಿ ಬಾರಿಯೂ ಜಂಗಮರ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಇವರ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!