ಬೆಳಗಾವಿಯಲ್ಲಿ ಹೇಗಿತ್ತು ಹೊಸ ವರ್ಷದ ಸಂಭ್ರಮಾಚರಣೆ
ಬೆಳಗಾವಿ : ನೂತನ ಕ್ಯಾಲೆಂಡರ್ ವರ್ಷವನ್ನು ಕುಂದಾನಗರಿ ಜನ ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು. ಭಾನುವಾರ ರಾತ್ರಿ ನಗರದ ವಿವಿಧ ಖಾಸಗಿ ಹೊಟೇಲ್ ಗಳಲ್ಲಿ ಯುವ ಸಮೂಹ ಅತ್ಯಂತ ಸಡಗರದಿಂದ ವರ್ಷದ ಕೊನೆಯ ದಿನ ಆಚರಿಸಿದರು.
ನೂತನ ವರ್ಷದ ಮೊದಲ ದಿನವಾದ ಸೋಮವಾರ ನಗರದ ವಿವಿಧ ದೇವಸ್ಥಾನಗಳಿಗೆ ಜನ ತೆರಳಿ ದೇವರಿಗೆ ವಿಶೇಷ ಸಲ್ಲಿಸುವ ಮೂಲಕ ಹೊಸ ವರ್ಷದ ಆಚರಣೆ ಮಾಡಿದ್ದು ಸುಂದರವಾಗಿತ್ತು.
ಒಟ್ಟಿನಲ್ಲಿ ಕ್ಯಾಲೆಂಡರ್ ವರ್ಷ ನಾಡಿನ ಜನರಲ್ಲಿ ಸುಖ, ಶಾಂತಿ ಹಾಗೂ ಆರೋಗ್ಯ ನೀಡಲಿ. ಹಾಗೂ ಎಲ್ಲರಿಗೂ ಒಳಿತಾಗಲಿ ಎಂದು ಬೆಳಗಾವಿ ವಾಯ್ಸ್ ಪರವಾಗಿ ಪ್ರೀತಿಪೂರ್ವಕ ಶುಭಾಶಯಗಳು.


