ಪ್ರಧಾನಿಗೆ ನಿಂದನೆ : ವ್ಯಾಪಾರಿ ವಿರುದ್ಧ ಕ್ರಮಕ್ಕೆ ಎಸ್ಪಿಗೆ ಮನವಿ

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಾಚ್ಯ ಪದಬಳಸಿದ್ದ ಪಟ್ಟಣದ ವ್ಯಾಪಾರಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಥಣಿ ಬಿಜೆಪಿ ಮಂಡಲದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಅಥಣಿ ಪಟ್ಟಣಕ್ಕೆ ಎಸ್ಪಿ ಕೆ. ರಾಮರಾಜನ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ದೇಶದ ಪ್ರಧಾನಿಗೆ ಅವಾಚ್ಯ ಪದ ಬಳಸಿರುವ ಆರೋಪಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಈ ವೇಳೆ ಬಿಜೆಪಿ ತಾಲೂಕಾ ಅಧ್ಯಕ್ಷ ಗಿರೀಶ ಬುಟಾಳೆ, ಮುಖಂಡರಾದ ಅಪ್ಪಾಸಾಬ ಅವತಾಡೆ, ಸಿದ್ದು ಪಾಟೀಲ, ಮಲ್ಲಪ್ಪ ಹಂಚನಾಳ, ನಿಂಗಪ್ಪ ನಂದೇಶ್ವರ, ಮಲ್ಲಿಕಾರ್ಜುನ ಅಂದಾನಿ, ಪುಟ್ಟು ಹಿರೇಮಠ, ಸಂಪತಕುಮಾರ ಶೇಟ್ಟಿ, ಆನಂದ ಟೊಣಪಿ, ಸಂತೋಷ ಕಕಮರಿ, ಅಶೋಕ ದಾನಗೊಂಡ, ದೀಪಕ ಪಾಟೀಲ, ಸಿದ್ದು ಮಾಳಿ, ಶಿವಾನಂದ ಐಗಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

