ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಈ ಎಲ್ಲಾ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪಹಲ್ಗಾಮ ನಲ್ಲಿ ನಡೆದ ಭಯೋತ್ಪಾಕ ದಾಳಿ, ಆಪರೇಷನ್ ಸಿಂದೂರ ಹಾಗೂ ಭಾರತ, ಪಾಕಿಸ್ತಾನ ನಡುವಿನ ಕದನ ವಿರಾಮ ಕುರಿತು ಚರ್ಚೆ ನಡೆಸಲು ತಕ್ಷಣ ಸಂಸತ್ತಿನ ವಿಶೇಷ ಅಧಿವೇಶ ಕರೆಯುವಂತೆ ಒಂದೇ ಸಾಲಿನಲ್ಲಿ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಇದು ವಿರೋಧ ಪಕ್ಷಗಳ ಏಕಮತದ ಬೇಡಿಕೆಯಾಗಿದೆ. ಯುದ್ಧದ ಕುರಿತು ಚರ್ಚಿಸಲು ಕೂಡಲೇ ಸಂಸತ್ ಅಳಿವೆಶನ ಕರೆಯುವಂತೆ ಮನವಿ ಮಾಡಿದೆ. ಜೊತೆಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.