ನದಿ- ಇಂಗಳಗಾಂವ ಕೃಷಿ ಪತ್ತಿನ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಅಥಣಿ : ತಾಲೂಕಿನ ನದಿ ಇಂಗಳಗಾವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶುಕ್ರವಾರ ಜರುಗಿತು.
ನೂತನ ಅಧ್ಯಕ್ಷರಾಗಿ ವಿಠ್ಠಲ್ ರಾಚಗೌಡರ, ಉಪಾಧ್ಯಕ್ಷರಾಗಿ ಶೇಖರ ಮೋಕಾಶಿ ಆಯ್ಕೆಯಾದರು.
ಚುನಾವಣೆ ಗೆಲುವಿನ ನಂತರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಮಾರ ಮಠಪತಿ, ಅಲಗೌಡಾ ಮುದಿಗೌಡರ, ಶಂಕರ ಠಕ್ಕಣ್ಣವರ, ಮಂಜು ಗಿರಮಲ್ಲನವರ, ಸಿದ್ದಾರೂಢ ಮಠಪತಿ, ರಮೇಶ್ ಮೊಕಾಶಿ, ಗುರು ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


