Select Page

Advertisement

ಒಂದೇ ಕುಟುಂಬದ ನಾಲ್ವರು ಸಾವು : ಆತ್ಮಹತ್ಯೆ ಶಂಕೆ

ಒಂದೇ ಕುಟುಂಬದ ನಾಲ್ವರು ಸಾವು : ಆತ್ಮಹತ್ಯೆ ಶಂಕೆ

ಮೈಸೂರು : ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಮೃತರು ಚೇತನ್ ( 45 ), ರೂಪಾಲಿ ( 43 ), ಹೆಂಡತಿ, ಪ್ರೀಯವಂದನಾ ( 62 ), ಕುಶಾಲ್ ( 15 ) ಮೃತಪಟ್ಟ ದುರ್ದೈವಿಗಳು. ಮೈಸೂರಿನ ವಿಶ್ವೇಶ್ವರಯ್ಯ ನಗರದಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಚೇತನ್, ಮೂವರಿಗೆ ವಿಷ ನೀಡಿ, ಆ ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಚೇತನ್ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!