Select Page

Advertisement

ದಸರಾ ಸಡಗರದ ದಿನವೇ ಮೈಸೂರು ಮಹಾರಾಜರಿಗೆ ಗಂಡುಮಗು

ದಸರಾ ಸಡಗರದ ದಿನವೇ ಮೈಸೂರು ಮಹಾರಾಜರಿಗೆ ಗಂಡುಮಗು

ಮೈಸೂರು : ದಸರಾ ಹಬ್ಬದ ಸಡಗರದ ಸಂಭ್ರಮದ ದಿನವೇ ಮೈಸೂರು ಮಹಾರಾಜರ ಮನೆಗೆ ಹೊಸ ಅತಿಥಿ ಆಗಮಿಸಿದ್ದಾನೆ. ತ್ರಿಷಿಕಾ ಒಡೆಯರ್ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ಆಯುಧ ಪೂಜೆಯ ಶುಭ ದಿನದಂದು ತ್ರಿಷಿಕಾ‌ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 2017 ರಲ್ಲಿ ತ್ರಿಷಿಕಾ ಮೊದಲ ಮಗುವಿಗೆ ಜನ್ಮ‌ ನೀಡಿದ್ದರು.

ಮೊದಲ ಗಂಡುವಮಗು ಈಗ 7 ವರ್ಷದವನಿದ್ದು ಆದ್ಯವೀರ ಒಡೆಯರ್ ಎಂದು ಹೆಸರಿಡಲಾಗಿದೆ. ಇನ್ನೂ ಆಯುಧಪೂಜೆ ದಿನ ಮಗುವಿಗೆ ಜನ್ಮ‌ ನೀಡಿರುವ ಹಿನ್ನಲೆಯಲ್ಲಿ ಅರಮನೆ ಪೂಜೆಗಳು ಹೇಗೆ ನಡೆಯುತ್ತವೆ ಎಂಬ ಕುತೂಹಲ ಮೂಡಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!