Select Page

Advertisement

ಬಿಜೆಪಿ ವಿರುದ್ಧ ಮೊದಲ ಬಂಡಾಯದ ಬಾವುಟ ; ಕಟೀಲ್ ತಲೆ ಕುಟುಕಿದ ಅರುಣ

ಬಿಜೆಪಿ ವಿರುದ್ಧ ಮೊದಲ ಬಂಡಾಯದ ಬಾವುಟ ; ಕಟೀಲ್ ತಲೆ ಕುಟುಕಿದ ಅರುಣ

ಮಂಗಳೂರು : ಹಿಂದೂಪರ ಸಂಘಟನೆಗಳ ಮಾತೃಭೂಮಿ ಎಂದೇ ಕರೆಯುವ ಕರಾವಳಿ ಭಾಗದಲ್ಲಿ ಸಧ್ಯ ಬಂಡಾಯದ ಬಾವುಟ ಹಾರುವ ಲಕ್ಷಣ ಗೋಚರಿಸುತ್ತಿದೆ. ಮಾಜಿ ಬಿಜೆಪಿ  ರಾಜ್ಯಾಧ್ಯಕ್ಷರಿಗೆ ಈ ಬಾರಿ ಸ್ವ ಪಕ್ಷದವರೇ ಅಡ್ಡಗಾಲು ಆಗುವ ಸಾಧ್ಯತೆ ದಟ್ಟವಾಗಿದೆ.

ಹೇಳಿ ಕೇಳಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಪ್ರಭಲ ಹಿಂದುತ್ವದ ನೆಲ. ಇಲ್ಲಿ ಸಂಘ ಪರಿವಾರದ ಗಟ್ಟಿ ನಾಯಕತ್ವ ಇದೆ. ಒಂದೆರಡು ಕ್ಷೇತ್ರ ಬಿಟ್ಟರೆ ಉಳಿದ ಎಲ್ಲಾ  ಕಡೆಗಳಲ್ಲಿ ಬಿಜೆಪಿಗೆ ಪ್ರಭಲ ಎದುರಾಳಿ ಬುವವರೇ ಇಲ್ಲ. ಇಂತಹ ಕ್ಷೇತ್ರದ ಗದ್ದುಗೆ ಹಿಡಿಯಲು ಕಮಲ ಪಾಳೆಯದಲ್ಲಿ ಪೈಪೋಟಿ ಜೋರಾಗಿದೆ.

ಈ ಬಾರಿ ಲೋಕಸಭಾ ಟಿಕೆಟ್ ಪಡೆಯಲು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆಯಷ್ಟೇ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಜಿಲ್ಲಾ ಮಟ್ಟದ ಸಮಾವೇಶ ಮಾಡಿ, ಬಿಜೆಪಿ ಟಿಕೆಟ್ ಕೊಡಿ, ಇಲ್ಲವಾದರೆ ಸ್ವತಂತ್ರ ಸ್ಪರ್ಧೆಗೆ ರೆಡಿ ಎಂದಿದ್ದಾರೆ. ಹಾಗೆಯೇ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿವೆ.

ಇದರೊಂದಿಗೆ ಸತತ ನಾಲ್ಕನೇ ಬಾರಿ ಸ್ಪರ್ಧೆಗಿಳಿಯುವ ಹುಮ್ಮಸ್ಸಿನಲ್ಲಿದ್ದ ನಳಿನ್ ಸ್ಪರ್ಧೆಗೆ ಬಹಿರಂಗವಾಗಿಯೇ ಎರಡೂ ನಾಯಕರು ಸೆಡ್ಡು ಹೊಡೆದಿದ್ದು, ಕೊನೇ ಕ್ಷಣದ ಬದಲಾವಣೆಗಳು ನಡೆಯದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುತ್ವದ ಪ್ರತಿಪಾದಕರಿಂದಲೇ ಬಂಡಾಯದ ಬಿಸಿ ಕಾಡಲಿದೆ.

ಅದರಲ್ಲೂ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿದರೆ, ಈ ಬಂಡಾಯ ತಾರಕಕ್ಕೇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪುತ್ತಿಲ ಬಿಜೆಪಿ ಸೇರ್ಪಡೆಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ಬಳಿಕ ಈ ಆಕಾಂಕ್ಷೆಗಳು ಗರಿಗೆದರಿದ್ದವು.

ಆದರೆ ಪುತ್ತಿಲ ಪರಿವಾರ ಸಭೆಯೊಂದನ್ನು ನಡೆಸಿ ಬಿಜೆಪಿಗೆ ಮೂರು ದಿನಗಳ ಗಡುವನ್ನು ನೀಡಿದ್ದರು. ಮೂರು ದಿನಗಳಾಗಿ ಹಲವು ದಿನಗಳಾದರೂ ಬಿಜೆಪಿ ಹೈಕಮಾಂಡ್ ಈ ಗಡುವಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಇದು ಪುತ್ತಿಲ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.

Arunkumar puttila Nalin Kumar Katil Satyajit suratkal Karavali Namma kudla Dakshina Kannada Puttila parivara

Advertisement

Leave a reply

Your email address will not be published. Required fields are marked *

error: Content is protected !!