ಬಡ ಮಹಿಳೆಯರ ಸಬಲೀಕರಣವೇ ನಮ್ಮ ಮೂಲ ಉದ್ದೇಶ : ಪ್ರಭಾವತಿ ಮಸ್ತಮರಡಿ
ಬೆಳಗಾವಿ : ಸಮಾಜದ ಬಡ ಮಹಿಳೆಯರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದೇ ನಮ್ಮ ಪ್ರಭಾತಾಯಿ ಫೌಂಡೇಶನ್ ಮೂಲ ಧ್ಯೇಯ ಎಂದು. ಸಂಸ್ಥೆಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮಹಿಳಾ ಮುಖಂಡರಾದ ಪ್ರಭಾವತಿ ಮಸ್ತಮರಡಿ ಅಭಿಪ್ರಾಯಪಟ್ಟರು.
ಸೋಮವಾರ ಬೆಳಗಾವಿ ಧಕ್ಷಿಣ ವಿಧಾನಸಭಾ ಕ್ಷೇತ್ರದ ಮಚ್ಚೆ ಗ್ರಾಮಕ್ಕೆ ಭೇಟಿ ನೀಡಿದ ಇವರು ನೂರಾರು ಬಡ ಮಹಿಳೆಯರ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುತ್ತಿರು ಕಷ್ಟಗಳಿಗೆ ಸ್ಪಂದಿಸುವ ಪ್ರತಿಜ್ಞೆಯನ್ನು ಮಾಡಿದ ಇವರು. ತಮ್ಮದೇ ಪ್ರಭಾತಾಯಿ ಫೌಂಡೇಶನ್ ವತಿಯಿಂಸ ಸಹಾಯ ನೀಡುವ ಭರವಸೆ ನೀಡಿದರು.
ಮಹಿಳಾ ಸಬಲೀಕರಣ ಹಾಗೂ ಅವರನ್ನು ಬೆಂಬಲಿಸುವ ಉದ್ದೇಶದಿಂದ ಹುಟ್ಟಿಕೊಂಡ ಪ್ರಭಾತಾಯಿ ಫೌಂಡೇಶನ್ ಅನೇಕ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಸಧ್ಯ ಬೆಳಗಾವಿ ಮಹಿಳೆಯರ ಸೇವೆ ಸಿದ್ಧವಾಗಿರುವ ಈ ತಂಡ ಹುರುಪಿನಿಂದ ಕೆಲಸ ಪ್ರಾರಂಭಿಸಿದೆ.