Select Page

Advertisement

ಸಹೋದರನ ದಶಕಗಳ ವೈದ್ಯಕೀಯ ಸೇವೆ ಕೊಂಡಾಡಿದ ಮಹೇಶ್ ಕುಮಠಳ್ಳಿ

ಸಹೋದರನ ದಶಕಗಳ ವೈದ್ಯಕೀಯ ಸೇವೆ ಕೊಂಡಾಡಿದ ಮಹೇಶ್ ಕುಮಠಳ್ಳಿ

ಅಥಣಿ : ಅಥಣಿ ನೆಲದಲ್ಲಿ ಡಾ.ಪ್ರಕಾಶ ಕುಮಠಳ್ಳಿ ಯವರ ಮೂವತ್ತು ವೈದ್ಯಕೀಯ ಸೇವೆ ಅಪಾರ ಹಾಗೂ ಅನುಕರಣಿಯವಾದುದು ಎಂದು ಮಾಜಿ ಶಾಸಕ ಮಹೇಶ ಕುಮಠಳ್ಳಿ  ಹೇಳಿದರು.

ಅಥಣಿ ಪಟ್ಟಣದ ಕುಮಠಳ್ಳಿ ಅವರ ದಂತ ಚಿಕಿತ್ಸೆ  ಆಸ್ಪತ್ರೆಯಲ್ಲಿ ಡಾ.ಪ್ರಕಾಶ ಕುಮಠಳ್ಳಿ ವೈದ್ಯಕೀಯ ಕ್ಷೇತ್ರದಲ್ಲಿ    ತಮ್ಮ ಮೂವತ್ತು ವರ್ಷದ ಸೇವೆ ಪೂರೈಸಿದ ಪ್ರಯುಕ್ತ  ವಿಶೇಷ ಪೂಜೆ ಹಾಗೂ ಸಾರ್ವಜನಿಕ ಸಂವಾದ  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು.

ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು ಎಂದಿಗೂ ವೈದ್ಯಕೀಯ ಸೇವೆಯನ್ನು ಆದಾಯದ ವೃತ್ತಿಯೆಂದು ಪರಿಗಣಿಸದೆ ಸೇವೆಯೆಂದು ಭಾವಿಸಿ ತಮ್ಮ ಅವಿರತ ಮೂವತ್ತು ವರ್ಷದ  ವೈದ್ಯಕೀಯ ಸೇವೆ ಗೈದದ್ದು ಸಾರ್ಥಕವಾದುದು ಎಂದರು.

ಈ ವೇಳೆ  ಡಾ.ಪ್ರಕಾಶ ಕುಮಠಳ್ಳಿ ಮಾತನಾಡಿ ಅಥಣಿ ನೆಲದಲ್ಲಿ ಶಿವಯೋಗಿಗಳ ಆಶಿರ್ವಾದ ನಾಡಿನ ಜನತೆಯ ಪ್ರೀತಿ ವಿಶ್ವಾಸದ ಫಲವಾಗಿ  ವೈದ್ಯಕೀಯ ಕ್ಷೇತ್ರದಲ್ಲಿ  ನಾನು  ಮೂವತ್ತು ವರ್ಷ ಸುಧೀರ್ಘ  ಸೇವೆ ಸಲ್ಲಿಸಲು ಸಾಧ್ಯವಾಗಿದೆ,

ದಂತ ವೈದ್ಯರಾದ ನಾವು ಅಥಣಿ ಪಟ್ಟಣ ಅಲ್ಲದೇ ತಾಲೂಕಿನ ಎಲ್ಲ ಗ್ರಾಮಗಳ ಮತ್ತು ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯೋಪಚಾರ ಒದಗಿಸಿದ ಖುಷಿ ಇದೆ ಎಂದರು.

ಹಲ್ಲುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಆರೋಗ್ಯ ಶಿಬಿರ, ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪ ನಮ್ಮದಾಗಿದೆ ಮತ್ತು ಕುಮಠಳ್ಳಿ ಪರಿವಾರದ 2ನೇ ತಲೆಮಾರಿನ ನಾಲ್ವರು ಯುವ ವೈದ್ಯರು ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿ ಮುಂದಿನ ದಿನಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ದಿಗ್ವಿಜಯ ಪವಾರದೇಸಾಯಿ, ರಮೇಶಗೌಡ ಪಾಟೀಲ್, ಮುತ್ತಣ್ಣ ಸಂತಿ, ನಾನಾಸಾಬ ಅವತಾಡೆ ,  ಸಿದ್ದಪ್ಪ ಮುದಕಣ್ಣವರ,ಮಲ್ಲಪ್ಪಾ ಹಂಚಿನಾಳ , ಸಿದ್ದು ಹಂಡಗಿ , ಸಿದ್ದು ಪಾಟೀಲ,ಡಾ.ಅರ್ಥವ ಕುಮಠಳ್ಳಿ , ಉದ್ಯಮಿ ಮುರಘೆಶ ಕುಮಠಳ್ಳಿ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಸೇರಿದಂತೆ ಹಲವಾರು ಗಣ್ಯರು ಕುಮಠಳ್ಳಿ ಪರಿವಾರದ ಸದಸ್ಯರು  ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!