Select Page

Advertisement

ಇಂದು ಸಪ್ತಸಾಗರದಲ್ಲಿ ಕನ್ನಡ ಕೋಗಿಲೆ ಮಹನ್ಯಾ ಪಾಟೀಲ್ ಸಂಗೀತ ಸಂಜೆ ಕಾರ್ಯಕ್ರಮ

ಇಂದು ಸಪ್ತಸಾಗರದಲ್ಲಿ ಕನ್ನಡ ಕೋಗಿಲೆ ಮಹನ್ಯಾ ಪಾಟೀಲ್ ಸಂಗೀತ ಸಂಜೆ ಕಾರ್ಯಕ್ರಮ



ಅಥಣಿ : ಸಪ್ತಸಾಗರ ಗ್ರಾಮದಲ್ಲಿ ನಡೆಯುತ್ತಿರುವ ಶಿವಬಸವ ಗುರುಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕನ್ನಡ ಕೋಗಿಲೆ ಮಹನ್ಯ ಪಾಟೀಲ ಇಂದು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಹಾವೇರಿಯ ಹುಕ್ಕೇರಿಮಠದ ಶ್ರೀ ಶಿವಬಸವ ಶಿವಯೋಗಿಗಳ ಜನ್ಮಸ್ಥಳ ಸಪ್ತಸಾಗರ ಗ್ರಾಮದಲ್ಲಿ ಮೇ. 1 ರಿಂದ 5 ರ ವರೆಗೆ ಐದು ದಿನ ಶ್ರೀ ಶಿವಬಸವ ಗುರುಮಂದಿರ ಲೋಕಾರ್ಪಣೆ ಹಿನ್ನಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರವಚನ, ಜ್ಯೋತಿ ರತಯಾತ್ರೆ, ಸಾವಯವ ಕೃಷಿ ಚಿಂತನ, ಬೈಕ್ ರ್ಯಾಲಿ, ಮಹಿಳಾ ಸಮಾವೇಶ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿವೆ.

ಮೇ. 5 ರಂದು ನೂತನವಾಗಿ ನಿರ್ಮಾಣಗೊಂಡ ಶ್ರೀ ಶಿವಬಸವ ಗುರುಮಂದಿರದಲ್ಲಿ ಕಳಸಾರೋಹಣ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಜರುಗಲಿದೆ.





Advertisement

Leave a reply

Your email address will not be published. Required fields are marked *

error: Content is protected !!