
ಲೋಕಾಯುಕ್ತ ದಾಳಿ : 9 ಲಕ್ಷ ಹಣದ ಗಂಟು ಮನೆಯಿಂದ ಎಸೆದ ಅಧಿಕಾರಿ

ಹಾವೇರಿ : ಲೋಕಾಯುಕ್ತ ದಾಳಿ ಸಂದರ್ಭದಲ್ಲಿ 9 ಲಕ್ಷ ರೂ ಹಣದ ಗಂಟು ಕಟ್ಟಿ ಕಿಟಕಿಯಿಂದ ಮನೆ ಆಚೆ ಎಸೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾಶಿನಾಥ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಭಜಂತ್ರಿ ಮನೆಗೆ ನಸುಕಿನ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿ ಮಂಚದ ಕೆಳಗೆ ಇಟ್ಟಿದ್ದ 9 ಲಕ್ಷ ರೂ. ಹಣವನ್ನು ಮೂಟೆಯಲ್ಲಿ ಕಟ್ಟಿ ಕಿಟಕಿಯಿಂದ ಆಚೆ ಎಸೆದಿದ್ದಾರೆ.
ಹಣ ಎಸೆದಿದ್ದು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಾಲೇ ಹಣವನ್ನು ದಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು 14 ಲಕ್ಷ ರೂ. ಹಣ ಪತ್ತೆಯಾಗಿದೆ.