Select Page

Advertisement

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ವಾದವೇ ಬೇರೆ…!

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ವಾದವೇ ಬೇರೆ…!

ಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಹೇಳಿಕೆಯನ್ನು ತಳ್ಳಿ ಹಾಕದೆ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರ ವಿಭಿನ್ನ ವಾದ ನಗೆಪಾಟಲಿಗೆ ಈಡಾಗಿದೆ‌.

ಹೆಬ್ಬಾಳ್ಕರ್ ವಿಚಾರವಾಗಿ ಜಿಲ್ಲಾಧ್ಯಕ್ಷರ ಸುಭಾಷ್ ಪಾಟೀಲ್ ಮಾತನಾಡಿ ಅಂತಹದ್ದೇನು ನಡದೇ ಇಲ್ಲ ಎಂಬಂತಹ ಹೇಳಿಕೆ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಈಡಾಗಿದೆ. ಮಹಿಳೆಯರಿಗೆ ಗೌರವ ನೀಡುವ ಪಕ್ಷದ ಜಿಲ್ಲಾಧ್ಯಕ್ಷರ ದ್ವಂದ್ವ ಹೇಳಿಕೆ ಎಷ್ಟು ಸರಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಮಹಿಳೆಯರು ಪ್ರತಿಭಟನೆ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ತಮ್ಮ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಇದೊಂದು ಬಿಜೆಪಿ ಹಿಡನ್ ಅಜೆಂಡಾ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪದ ಕುರಿತು ಪಕ್ಷದ ಪರ ಸ್ಪಷ್ಟತೆ ನೀಡದ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಮಾತ್ರ‌, ಅವಹೇಳನಕಾರಿ ಎಂಬಂತ ವಿಷಯ ಏನು ನಡೆದಿಲ್ಲ ಎಂಬ ವಿತ್ತಂಡವಾದ ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಹೆಬ್ಬಾಳ್ಕರ್ ಆರೋಪಕ್ಕೆ ಉತ್ತರಿಸಲಾಗದ ಬಿಜೆಪಿ ನಾಯಕರ ಮಧ್ಯೆ ಸಮನ್ವಯತೆ ಕೂಡಾ ಇಲ್ಲದಿರುವುದು ವಿಪರ್ಯಾಸ.

Advertisement

Leave a reply

Your email address will not be published. Required fields are marked *

error: Content is protected !!