Select Page

Advertisement

ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ‌ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ‌ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಹಾಸನ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಾಸನಾಂಬೆ ದರ್ಶನ ಉತ್ಸವದಲ್ಲಿ ಸಾಮಾನ್ಯ ಭಕ್ತರಂತೆ ಸರಳತೆಯನ್ನು ಮೆರೆದಿದ್ದಾರೆ. ಅವರು ಸ್ವತಃ ಸಾವಿರ ರೂಪಾಯಿ ಟಿಕೆಟ್ ಖರೀದಿಸಿ, ಸಾಮಾನ್ಯ ಭಕ್ತರೊಟ್ಟಿಗೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಬೆಂಗಳೂರಿನಿಂದ ಶುಕ್ರವಾರ ಸಂಜೆ ಹಾಸನಕ್ಕೆ ಆಗಮಿಸಿದ್ದ ಸಚಿವರಿಗೆ ಜಿಲ್ಲಾಡಳಿತ ನಿಗದಿಪಡಿಸಿದ್ದ ಶಿಷ್ಟಾಚಾರದ ಸಮಯ ಮುಗಿದಿತ್ತು. ಈ ಸಂದರ್ಭದಲ್ಲಿ, “ರೂಲ್ಸ್ ಬ್ರೇಕ್ ಮಾಡುವುದು ಸರಿಯಲ್ಲ” ಎಂದು ನಿರ್ಧರಿಸಿದ ಸಚಿವರು ಯಾವುದೇ ವಿಶೇಷ ಸವಲತ್ತು ಪಡೆಯದೆ ದರ್ಶನ ಪಡೆದರು. ಸಚಿವರ ಈ ನಡೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಹಾಸನ ತಹಸೀಲ್ದಾರ್ ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಧರಣಿ ಕುಮಾರ್, ಮುಖಂಡರಾದ ಪಲ್ಲವಿ ಸೇರಿದಂತೆ ಹಲವರು ಸರತಿ ಸಾಲಿನಲ್ಲಿ ಸಚಿವರಿಗೆ ಸಾಥ್ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!