ಮಾತಾಡಿ ಕೆಟ್ಟ ಸಿ.ಟಿ ರವಿ ; ಹೈಕೋರ್ಟ್ ನಲ್ಲಿ ಭಾರೀ ಹಿನ್ನಡೆ
ಬೆಂಗಳೂರು : ಬೆಳಗಾವಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿರುದ್ಧ ಅಶ್ಲೀಲ ಪದಬಳಕೆ ಮಾಡಿದ್ದ ಪರಿಷತ್ ಸದಸ್ಯ ಸಿ.ಟಿ ರವಿಗೆ ಕೋರ್ಟ್ ನಲ್ಲಿ ಹಿನ್ನಡೆ ಉಂಟಾಗಿದೆ.
ತಮ್ಮ ವಿರುದ್ಧದ ಪ್ರಕರಣದ ರದ್ದು ಕೋರಿ ಸಿ.ಟಿ ರವಿ ಅರ್ಜಿ ಸಲ್ಲಿಸಿದ್ದರು. ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ ಸಿ.ಟಿ ರವಿ ಅರ್ಜಿಯನ್ನು ವಜಾಗೊಳಿಸಿದೆ. ಸದನದಲ್ಲಿ ಈ ರೀತಿಯ ಹೇಳಿಕೆ ಕೊಟ್ಟರೆ ರಕ್ಷಣೆಗೆ ಬರಲ್ಲ ಎಂದು ಹೇಳಿದೆ.
ಒಂದು ವೇಳೆ ಆರೋಪಿಸಲಾದ ಮಾತುಗಳನ್ನು ಆಡಿದ್ದರೆ, ಆರೋಪಿಸಲಾದ ವರ್ತನೆಯನ್ನು ಪ್ರದರ್ಶಿಸಿದ್ದರೆ, ಅದು ಮಹಿಳೆಗೆ ಘನತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದಿದ್ದಾರೆ.
ಇದಕ್ಕೂ, ಸದನ ಕಾರ್ಯಕಲಾಪಕ್ಕೂ ಸಂಬಂಧವಿಲ್ಲ, ಸದನದಲ್ಲೇ ಇಂತಹ ಹೇಳಿಕೆಯನ್ನೂ ನೀಡಿದ್ದರೂ, ಸದನ ಸದಸ್ಯ ಎಂಬ ಕಾರಣಕ್ಕೆ ರಕ್ಷಣೆ ಸಾಧ್ಯವಿಲ್ಲ ಎಂದು ಕೋರ್ಟ್ ಸಿ.ಟಿ ರವಿ ಗೆ ತರಾಟೆಗೆ ತಗೆದುಕೊಂಡಿದೆ.
.

