ಡಿಸಿಸಿ ಚುನಾವಣೆ ; ಲಕ್ಷ್ಮಣ ಸವದಿ ಬೆಂಬಲಕ್ಕೆ 100 ಕ್ಕೂ ಅಧಿಕ ಪಿಕೆಪಿಎಸ್ ಸದಸ್ಯರು
ಬೆಳಗಾವಿ : ಡಿಸಿಸಿ ನಿರ್ದೇಶಕ ಸ್ಥಾನದ ಅಥಣಿ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ ಸವದಿ ಬೆಂಬಲಕ್ಕೆ 100 ಕ್ಕೂ ಅಧಿಕ ಸದಸ್ಯರು ನಿಂತಿದ್ದಾರೆ.
ನಾಳೆ ಭಾನುವಾರ ಮತದಾನ ನಡೆಯುವ ಹಿನ್ನಲೆಯಲ್ಲಿ ಇವತ್ತೇ ಲಕ್ಷ್ಮಣ ಸವದಿ ಬೆಂಬಲಿತ ಪಿಕೆಪಿಎಸ್ ಸದಸ್ಯ ಮತದಾರರು ಪ್ರತ್ಯೇಕವಾಗಿ ಪ್ರಯಾಣ ಕೈಗೊಂಡಿದ್ದಾರೆ.
ಈ ಎಲ್ಲಾ ಪಿಕೆಪಿಎಸ್ ಸದಸ್ಯರು ನಾಳೆ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ತಮ್ಮ ಮತ ಚಲಾಯಿಸಲಿದ್ದಾರೆ. ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆಯನ್ನು ಲಕ್ಷ್ಮಣ ಸವದಿ ಪ್ರತಿಷ್ಠೆಯಾಗಿ ತಗೆದುಕೊಂಡಿದ್ದಾರೆ.


