Select Page

Advertisement

ಕೀಳುಮಟ್ಟದ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ; ರಮೇಶ್ ಜಾರಕಿಹೊಳಿಗೆ ಅಥಣಿ ಸಾಹುಕಾರ್ ಟಾಂಗ್

ಕೀಳುಮಟ್ಟದ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ; ರಮೇಶ್ ಜಾರಕಿಹೊಳಿಗೆ ಅಥಣಿ ಸಾಹುಕಾರ್ ಟಾಂಗ್

ಅಥಣಿ : ಕ್ಷೇತ್ರದ ಮತದಾರರು ತುಂಬಾ ಪ್ರಬುದ್ಧ ಜನ‌. ಸರಿಯಾದ ಸಮಯದಲ್ಲಿ ಪ್ರತ್ಯುತ್ತರ ‌ನೀಡುತ್ತಾರೆ. ಕೀಳುಮಟ್ಟದ ರಾಜಕೀಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ ಎಂದು ಪರೋಕ್ಷವಾಗಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ.

“ ಲಕ್ಷ್ಮಣ ಸವದಿ ಓರ್ವ ನಾಟಕಕಾರ ” ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇವರು. ಕೀಳುಮಟ್ಟದ ರಾಜಕೀಯ ಮಾಡಲಾರೆ. ವೈಯಕ್ತಿಕ ಹೇಳಿಕೆಗೆ ಚುನಾವಣೆ ಮೂಲಕ ಉತ್ತರಿಸುವೆ. ಕಳೆದ 30 ವರ್ಷಗಳಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ರೈತರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿರುವೆ. ಅಥಣಿ ಜನ ಯಾವತ್ತೂ ನನ್ನ ಕೈ ಬಿಡಲಾರರು ಎಂದರು.


ನಾನು ಬರುವ ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ಚುನಾವಣೆ ವೇಳೆ ಜನ ತಕ್ಕ ಪ್ರತ್ಯುತ್ತರ ನೀಡುತ್ತಾರೆ. ಅಥಣಿ ತಾಲೂಕಿನ ಜನ ಪ್ರಭುದ್ಧರು, ಬುದ್ಧಿವಂತರು ಇದ್ದು ಅವರ ಎಲ್ಲದಕ್ಕೂ ಬುದ್ಧಿವಂತಿಕೆಯಿಂದ ವಿರೋಧಿಗಳಿಗೆ ಉತ್ತರ ಕೊಡುತ್ತಾರೆ ಎಂದರು.

Advertisement

Leave a reply

Your email address will not be published. Required fields are marked *

error: Content is protected !!