Select Page

Advertisement

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ…!

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ…!


ಅಥಣಿ : ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಚಲಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ತಾಲೂಕಿನ ದರೂರ ಗ್ರಾಮದ ಬಳಿ ಸೋಮವಾರ ಸಂಜೆ ಸಂಭವಿಸಿದೆ.

ಕಾರ್ಯಕ್ರಮ ನಿಮಿತ್ತ ತೆರಳುವ ವೇಳೆ ಶಾಸಕ ಲಕ್ಷ್ಮಣ ಸವದಿ ಚಲಿಸುತ್ತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು ಶಾಸಕರ ಕಾರು ಜಖಂಗೊಂಡಿದೆ.

ಶಾಸಕ ಸವದಿ ಕಾರಿಗೆ ಗೂಡ್ಸ್ ವಾಹನ ಚಾಲಕ ಕುಡಿದ ಅಮಲಿನಲ್ಲಿ ಅಪಘಾತ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಲಕ್ಷ್ಮಣ ಸವದಿ ಅವರಿಗೆ ಯಾವುದೇ ಗಾಯಗಳಾಗಿಲ್ಲ, ಸುರಕ್ಷಿತವಾಗಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಅವರ ಕಾರು ಅಪಘಾತ ಘಟನೆ ಇದು ಮೂರನೇಬಾರಿಯಾಗಿದೆ. ಈ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದರು.

ಈ ಘಟನೆ ಕುರಿತು ಮಾಹಿತಿ ನೀಡಿರುವ ಲಕ್ಷ್ಮಣ ಸವದಿ. ನಾನು ಕಾರ್ಯಕ್ರಮ ನಿಮಿತ್ತ ದರೂರ ಮಾರ್ಗವಾಗಿ ತೆರಳುತ್ತಿದ್ದೇ. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ವಾಹನ ಸಾಗುತ್ತಿದ್ದವು. ಆ ಸಂದರ್ಭದಲ್ಲಿ ಗೂಡ್ಸ್ ವಾಹನ ಸವಾರ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ, ಯಾವುದೇ ತೊಂದರೆ ಆಗಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದು ಮಾಹಿತಿ ನೀಡಿದರು.



Advertisement

Leave a reply

Your email address will not be published. Required fields are marked *

error: Content is protected !!