ನಾವು ಸ್ವಾಭಿಮಾನಿ ಶಾಸಕರು ; ಖರೀದಿಸಲು ಸಾಧ್ಯವಿಲ್ಲ – ಲಕ್ಷ್ಮಣ ಸವದಿ
ಅಥಣಿ : ಕಾಂಗ್ರೆಸ್ ಶಾಸಕರು ಸ್ವಾಭಿಮಾನದಿಂದ ಇದ್ದಾರೆ ಅವರು ಎಷ್ಟೇ ಹಣದ ಬೇಡಿಕೆ ಇಟ್ಟರು ಖರೀದಿಸಲು ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್ ಕುರಿತು ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇವರು. ರಾಜ್ಯದ ಮುಖ್ಯಮಂತ್ರಿಯಾಗಿ ಹೇಳಿಕೆ ನೀಡಿದ್ದಾರೆ ಅಂದ್ರೆ ಅವರ ಬಳಿ ಏನಾದ್ರೂ ಮಾಹಿತಿ ಇರಬಹುದು.
ಬಿಜೆಪಿಯವರು 50 ಕೋಟಿ ಕೊಡಲಿ, 100 ಕೋಟಿ ಕೊಡಲಿ, ಆದ್ರೆ ಇಲ್ಲಿ ಮಾರಾಟಕ್ಕೆ ಯಾರೂ ಇಲ್ಲ. ಅವರು ಎಷ್ಟೇ ಡಿಮ್ಯಾಂಡ್ ಮಾಡಲಿ, ನಮ್ಮ ಶಾಸಕರು ಮಾರಾಟಕ್ಕಿಲ್ಲ.
ಎಲ್ಲ ಶಾಸಕರು ಸ್ವಾಭಿಮಾನದಿಂದ ಇದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.


