ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು : ಲಕ್ಷ್ಮಣ ಸವದಿ ಆರೋಪ
ಬೆಳಗಾವಿ : ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು, ನೀವು ಉತ್ತರ ಕರ್ನಾಟಕದವರನ್ನು ವಿರೋಧ ಮಾಡುತ್ತೀರಾ. ನಿಮಗೆ ಯಾರು ಕಿ ಕೊಟ್ಟಿದ್ದು ಎಂದು ಚನ್ನಾಗಿ ಗೊತ್ತಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ Laxman Savadi ಗಂಭೀರ ಆರೋಪ ಮಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಇವರು. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮಾತನಾಡುತ್ತಿರುವಾಗ ಬಿಜೆಪಿ ಸದಸ್ಯರು ಅಡ್ಡಿ ಪಡಿಸಿದರು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಲಕ್ಷ್ಮಣ ಸವದಿ ಶಿವಮೊಗ್ಗದವರು ಉತ್ತರ ಕರ್ನಾಟಕದ ವಿರೋಧಿಗಳು ಎಂದು ಗಂಭೀರ ಆರೋಪ ಮಾಡಿದರು.
ಸವದಿ ಮಾತನಾಡುವ ಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ ಕೂಗಾಟ ನಡೆಸಿದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಲಕ್ಷ್ಮಣ ಸವದಿ ಶಿವಮೊಗ್ಗ ಶಾಸಕನ ವಿರುದ್ಧ ಹರಿಹಾಯ್ದರು. ಅಷ್ಟೇ ಅಲ್ಲದೆ ಹೊರಗಡೆ ಹೋದರೆ ಜನ ನಿಮ್ಮನ್ನು ಕಬ್ಬು ತಗೆದುಕೊಂಡು ಹೊಡೆಯುತ್ತಾರೆ ಎಂದರು.


