ಸರ್ಕಾರಿ ಶಾಲೆ ಮುಚ್ಚಿದ್ರೆ ನೋಡು ; ಸವದಿ ಆಕ್ರೋಶಕ್ಕೆ ಡಿಡಿಪಿಐ ಗಪ್ ಚುಪ್
ಚಿಕ್ಕೋಡಿ : ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮೋಹನ ಹಂಚಾಟೆ ಅವರನ್ನು ಅಥಣಿ ಶಾಸಕ ಲಕ್ಷ್ಮಣ್ ಸವದಿ ತರಾಟೆ ತೆಗೆದುಕೊಂಡ ಘಟನೆ ಜರುಗಿದೆ
ಅಥಣಿ ಭಾಗದಲ್ಲಿ ಹೆಚ್ಚುವರಿಯಾಗಿ ಶಾಲೆ ತರಗತಿಗಳು ಹಾಗೂ ನೂತನ ಶಾಲೆಗಳಿಗೆ ಗ್ರಾಮಸ್ಥರು ಸ್ಥಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮುಖಾಂತರ ಮನವಿ ಸಲ್ಲಿಸುತ್ತಾರೆ, ಆದರೆ ಕೆಲವು ನಿಯಮಗಳ ತೊಂದ್ರೆ ಯಿಂದ ಡಿಡಿಪಿಐ ಅವುಗಳನ್ನು ರದ್ದು ಪಡಿಸಿದ ಹಿನ್ನೆಲೆ ಗ್ರಾಮಸ್ಥರು ಶಾಸಕ ಸವದಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರು ದೂರವಾಣಿ ಮುಖಾಂತರ ಚಿಕ್ಕೋಡಿ ಡಿಡಿಪಿಐ ಅವರನ್ನು ತರಾಟೆ ತೆಗೆದುಕೊಂಡಾರೆ.
ಅಥಣಿ ತಾಲೂಕು ಗಡಿಭಾಗದಲ್ಲಿರೋದು ನಿಮ್ಮ ಗಮನಕ್ಕೆ ಇಲ್ವಾ..? ಗಡಿಭಾಗದ ಕನ್ನಡ ಶಾಲೆಗಳನ್ನು ಮುಚ್ಚಬಾರದೆಂಬ ನಿಯಮದ ಬಗ್ಗೆ ನಿಮಗೆ ಅರಿವಿದೆಯೇ..? ಹೀಗಿದ್ರೂ ಅಥಣಿ ಬಿಇಒಗೆ ನೋಟೀಸ್ ಯಾಕೆ ಕೊಟ್ಟಿದ್ದೀರಿ,? ನೀ ನೋಟಿಸ್ ಕೊಟ್ಟಿದ್ದಕ್ಕೆ, ಅಥಣಿ ಬಿಇಒ ನನಗೆ ಉತ್ತರ ನೀಡ್ತಿಲ್ಲ.
ಇನ್ಮೇಲೆ ಯಾವುದೇ ಸರ್ಕಾರಿ ಶಾಲೆಗಳು ಬಂದ್ ಆಗದ ರೀತಿ ಮಾಡಬೇಕು. ಒಂದು ವೇಳೆ ಏನಾದ್ರೂ ಶಾಲೆಗಳು ಬಂದ್ ಆದ್ರೆ ಕೆಡಿಪಿ ಸಭೆಯಲ್ಲಿ ನಿನ್ನ ನೋಡಬೇಕಾಗುತ್ತದೆ. ಇದೇ ತಿಂಗಳು 25 ರಂದು ಕೆಡಿಪಿ ಸಭೆ ಇದೆ ಸಭೆಗೆ ಹಾಜರಾಗು, ಬಳಿಕ ಅದರ ಬಗ್ಗೆ ಚರ್ಚಿಸೋಣ ಎಂದು ಶಾಸಕ ಲಕ್ಷ್ಮಣ್ ಸವದಿ ಸಾರ್ವಜನಿಕವಾಗಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ.


