ಯಾವಾಗಿನಿಂದ ಮಹಿಳೆಯರಿಗೆ ಉಚಿತ ಬಸ್ ಸೇವೆ – ಯಾವೆಲ್ಲ ಬಸ್ ಅವಕಾಶ
ಬೆಳಗಾವಿ : ಜೂನ್ 11 ರಿಂದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಕರ್ನಾಟಕ ರಾಜ್ಯಾದ್ಯಂತ ಉಚಿತ ಬಸ್ ಸಚಾರ ಸೇವೆ ಕಲ್ಪಿಸಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸ್ಲೀಪರ್ ಹಾಗೂ ಎಸಿ ಬಸ್ ಹೊರತುಪಡಿಸಿ ಯೋಜನೆ ಜಾರಿ ಮಾಡಲಾಗಿದೆ.
ಈ ಕುರಿತು ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ. ಸರ್ಕಾರ ಮೊದಲು ಘೋಷಣೆ ಮಾಡಿರುವಂತೆ, ರಾಜ್ಯದ ಎಲ್ಲಾ ಸಮುದಾಯದ ಮಹಿಳೆಯರಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಸೇರಿದಂತೆ ಉಚಿತ ಬಸ್ ಸೇವೆ ಕಲ್ಪಿಸಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ.
ಇದೇ ಜೂನ್ 11 ರಿಂದ ಯೋಜನೆ ಜಾರಿಗೆ ಬರಲಿದೆ
ಕೆಎಸ್ಆರ್ಟಿಸಿ & ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಎಸಿ ಹಾಗೂ ಸ್ಲೀಪರ್ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ.
ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ವ್ಯವಸ್ಥೆ


