Select Page

Advertisement

ಜೋಡೆತ್ತು ಒಂದಾಗಿವೆ, ರಾಯಬಾಗ ಗೆಲುವು ನಮ್ಮದೆ..! ಗುಡುಗಿದ ಕುಡಚಿ ಶಾಸಕ ತಮ್ಮಣ್ಣವರ

ಜೋಡೆತ್ತು ಒಂದಾಗಿವೆ, ರಾಯಬಾಗ ಗೆಲುವು ನಮ್ಮದೆ..! ಗುಡುಗಿದ ಕುಡಚಿ ಶಾಸಕ ತಮ್ಮಣ್ಣವರ



ಬೆಳಗಾವಿ : ರಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ಜೋಡೆತ್ತು ಒಂದಾಗಿವೆ. ನಮ್ಮ ಕ್ಷೇತ್ರದ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ. ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆ ಗೆಲ್ಲುವ ಮೂಲಕ‌‌ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.‌

ಬುಧವಾರ ಹಾರೂಗೇರಿಯಲ್ಲಿ ನಡೆದ ಡಿಸಿಸಿ ನಿರ್ದೇಶಕ ಸ್ಥಾನದ ರಾಯಬಾಗ ಕ್ಷೇತ್ರದ ಅಭ್ಯರ್ಥಿ ಬಸಗೌಡ ಆಸಂಗಿ ಪರವಾಗಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ರಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ಎರಡೂ ಜೋಡೆತ್ತು ಸೇರಿದರೆ ಗೆಲುವು ನಮ್ಮದೆ. ಡಿಸಿಸಿ ನಿರ್ದೇಶಕ ಸ್ಥಾನದ ಅಭ್ಯರ್ಥಿ ಆಯ್ಕೆ ಮಾಡುವಂತೆ ಬಹಳ ದಿನಗಳ ಹಿಂದೇ ಹೇಳಿದ್ದೇ. ತಡವಾದರೂ ಒಬ್ಬ ಸಮರ್ಥ ಅಭ್ಯರ್ಥಿ ಕಣಕ್ಕಿಳಿದಿದ್ದು ಒಳ್ಳೆಯದಾಯಿತು.

ನಮ್ಮೊಳಗಿನ ಅಸಮಾಧಾನ ಮರೆತು ಈ ಚುನಾವಣೆ ಗೆಲ್ಲುವ ಮೂಲಕ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ್, ಮಾಜಿ ಸಚಿವ ಎ.ಬಿ ಪಾಟೀಲ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ರಾಯಬಾಗ ಕ್ಷೇತ್ರದ ಅಭ್ಯರ್ಥಿ ಬಸಗೌಡ ಆಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!