ಉತ್ತಮ ಬದುಕಿಗೆ ಶಿಕ್ಷಣ ಅನಿವಾರ್ಯ : ಕೃಷ್ಣಕುಮಾರ್
ಬೆಳಗಾವಿ : ಶಿಕ್ಷಣ ಕಲಿತ ಬದುಕು ಬಹಳ ಸುಂದರವಾಗಿರುತ್ತದೆ. ಯಾವುದೇ ವಿಷಯ ತಿಳಿದುಕೊಳ್ಳಲು ಜೀವನಲ್ಲಿ ಅಕ್ಷರದ ಪಾತ್ರ ಬಹಳಮಖ್ಯವಾಗಿದ್ದು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಿಂಡಲಗಾ ಕಾರಾಗೃಹ ಮುಖ್ಯ ಅಧೀಕ್ಷಕರಾದ ಕೃಷ್ಣಕುಮಾರ್ ಹೇಳಿದರು.
ಬುಧವಾರ ನಗರದ ಹಿಂಡಲಗಾ ಕಾರಾಗೃಹದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯಗಳ ಸಂಯುಕ್ತಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು.
ತಾವೆಲ್ಲಾ ವಿನಯದಿಂದ ಓದು ಬರಹ ಕಳಯಬೇಕು ಅನಕ್ಷರಸ್ಥರಾದ ಒಬ್ಬ ವ್ಯಕ್ತಿ ಓದು ಬರಹ ಕಲಿತಾಗ ಅವನಿಗೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು , ಪ್ರಪಂಚದ ವಿದ್ಯಮಾನಗಳನ್ನು ತಿಳಿಯಲು ಶಿಕ್ಷಣ ಬೇಕೆ ಬೇಕು, ಅನಕ್ಷರಸ್ಥ ಬಂದಿಗಳು ವಿದ್ಯಾವಂತರಾಗಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಮುಖ್ಯ ಅತಿಥಿ ಮೀನಾಕ್ಷಿ ಪಾಟೀಲ್ ಮಾತನಾಡಿ. ತಪ್ಪುಮಾಡುವುದು ಮಾನವನ ಸಹಜ ಗುಣ ಅದನ್ನು ಮತ್ತೆ ಮಾಡದೇ ತಿದ್ದುಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು. ಕ್ಷೇತ್ರ ಸಮನ್ವಯ ಅಧಿಕಾರಿ ಈರಯ್ಯಹಿರೇಮಠ ಮಾತನಾಡಿ. ಕಾರಾಗೃಹದಲ್ಲಿ ಆಯೋಜಿಸುವ ಕಾರ್ಯಕ್ರಮ ತರಬೇತಿಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು. ಹಾಗೂ ಇದರ ಲಾಭ ಪಡೆಯಬೇಕು ಎಂದರು.
ಈ ಸಂಧರ್ಬದಲ್ಲಿ ಬಿ ಆರ್ ಪಿ ರಿಜ್ವಾನ್ ನಾವಗೇಕರ, ಪ್ರಿಯಾ ಜವಳಿ, ಹಾಗೂ ಶಶಿಕಾಂತ ಉಪಸ್ಥಿತಿರಿದ್ದರು.

