ಬೆಳಗಾವಿ ಕೆಎಮ್ಎಫ್ ನಲ್ಲಿ ಉದ್ಯೋಗಾವಕಾಶ ; ಯಾವೆಲ್ಲ ಹುದ್ದೆ ಖಾಲಿ, ಇಲ್ಲಿದೆ ಮಾಹಿತಿ
ಬೆಳಗಾವಿ : ಕರ್ನಾಟಕ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಬೆಳಗಾವಿ ಖಾಲಿ ಇರುವ ಹುದ್ದೇಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ 46 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಹಾಯಕ ವ್ಯವಸ್ಥಾಪಕ ಎ.ಹೆಚ್ ಎ.ಐ – ೦೨, ಸಹಾಯಕ ವ್ಯವಸ್ಥಾಪಕ ವಿತ್ತ – ೦೧ ತಾಂತ್ರಿಕ ಅಧಿಕಾರಿ ಡಿಟಿ – ೦೩ ತಾಂತ್ರಿಕ ಅಧಿಕಾರಿ ಇಎಂ – ೦೩ ಸೇರಿದಂತೆ ಒಟ್ಟು 46 ಹುದ್ದೆಗಳ ಆಯ್ಕೆ ನಡೆಯಲಿದೆ.
ದಿನಾಂಕ 28/8/2023 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, 26/09/2023 ರ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು www.bemul.in ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದ್ದು ಮಾಹಿತಿ ಪಡೆಯಬಹುದಾಗಿದೆ.



