
ಕಣ್ಣಿದ್ದು ಕುರುಡರಾದ ಕಿತ್ತೂರು ಪೊಲೀಸ್ : ಮುಂದುವರಿದ ಡಿಸಿಸಿ ಗುದ್ದಾಟ

ಕಿತ್ತೂರು : ನ್ಯಾಯದ ಪರವಾಗಿ ನಿಂತು ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸರು ಮಾಡುತ್ತಿರುವ ಅವಾಂತದಿಂದ ಯಾವೆಲ್ಲ ಸಮಸ್ಯೆ ಸೃಷ್ಟಿ ಆಗುತ್ತವೆ ಎಂಬುದಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪಷ್ಟ ನಿದರ್ಶನವಾಗಿದೆ.
ಹೌದು ಚನ್ನಮ್ಮನ ಕಿತ್ತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್ ಗೆ ಮತ ಚಲಾಯಿಸಲು ಮತಹಕ್ಕು ಪಡೆಯುವ ಸಭೆಯ ದಿನವಾಗಿದ್ದ ಶುಕ್ರವಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಸರಿಯಾದ ನಿಯಮಾವಳಿಯಲ್ಲಿ ಸಭೆ ನಡೆಸುತ್ತಿಲ್ಲ ಎಂದು ಸಂಘದ ನಿರ್ದೇಶಕರ ಮತ್ತು ಕಾರ್ಯದರ್ಶಿ ನಡುವೆ ವಾಗ್ದಾಳಿ ನಡೆಯಿತು.
ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಗಂಪುಗಳ ಮಧ್ಯ ಮಾರಾಮಾರಿ ಹೊಡೆದಾಟ ನಡೆಯಿತು. ಪೊಲೀಸ್ ಠಾಣೆ ಮುಂದೆ ನಡೆದ ಎರಡೂ ಗುಂಪುಗಳ ಗಲಾಟೆ ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಆಗಮಿಸಿದ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಪ್ರವೀಣ ಗಂಗೋಳ ಮುಖ್ಯ ಕಾರ್ಯನಿರ್ವಾಹಕ ಭೀಮಪ್ಪನನ್ನು ಸುರಕ್ಷಿತವಾಗಿ ಪೊಲೀಸ್ ಠಾಣೆಗೆ ಕರೆ ತಂದರು.
ಮೊದಲೇ ಬಂದೊಬಸ್ತ್ ಮಾಡಿಕೊಳ್ಳಬೇಕಾದ ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದ ಪೊಲೀಸ್ ಠಾಣೆಯ ಮುಂದೆ ಸುಮಾರು 2 ಗಂಟೆಗೆವರೆಗೆ ರಣಾಂಗಣದಂತೆ ಸೃಷ್ಟಿಯಾಗಿತ್ತು.
ಒಟ್ಟು 12 ಸದಸ್ಯರ ಒಳಗೊಂಡ ಸಂಘದ ಆಡಳಿತ ಸಭೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಕ್ರಮ ಇನಾಮದಾರ ಪರ ಏಟು ಸದಸ್ಯರು ಹಾಗೂ ನಾಲ್ಕು ಸದಸ್ಯರು ಹಾಗೂ ಬ್ಯಾಂಕ್ ನಿರೀಕ್ಷಕ ಶಿವಾನಂದ ಕೋಟಗಿ ಸೇರಿ ಐದು ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾನಾಸಾಹೇಬ ಪಾಟೀಲ ಪರ ಆಗಮಿಸಿದರು.