ಪಾರ್ಟಿ ಮಾಡಲು ರೆಸಾರ್ಟ್ ಗೆ ಹೋಗಿದ್ದ ಯುವಕ ಈಜುಕೊಳದಲ್ಲಿ ಮುಳುಗಿ ಸಾವು
ಬೆಳಗಾವಿ : ಸ್ನೇಹಿತರೊಂದಿಗೆ ರೆಸಾರ್ಟ್ ಗೆ ಹೋಗಿದ್ದ ಯುವಕ ಸ್ವಿಮ್ಮಿಂಗ್ ಪೂಲ್ ಗೆ ಮುಳುಗಿ ಸಾವಣಪ್ಪಿರುವ ಘಟನೆ ಕಣಕುಂಬಿ ಪ್ರದೇಶದಲ್ಲಿ ನಡೆದಿದೆ.
ಬೆಳಗಾವಿ ನಗರದ ಖಾಸಬಾಗ ನಿವಾಸಿ ಮಹಾಂತೇಶ ಗುಂಜೀಕರ (26) ಮೃತ ಯುವಕ. ಎಲ್,ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವ ಸಹ ಕೆಲಸಗಾರರ ಜೊತೆಗೂಡಿ ಕಣಕುಂಬಿ ರೆಸಾರ್ಟ್ ಗೆ ಮೋಜು ಮಾಡಲು ಹೋಗಿದ್ದರು.
ಭಾನುವಾರ ಮಧ್ಯಾಹ್ನ ಈಜುಕೊಳದಲ್ಲಿ ಇಳಿದಿದ್ದ ಮಹಾಂತೇಶ ಗುಂಜೀಕರ ಅಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಈ ಕುರಿತು ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಬರುವ ಫೆಬ್ರವರಿಯಲ್ಲಿ ಮೃತ ಮಹಾಂತೇಶ್ ಮದುವೆ ನಿಶ್ಚಯವಾಗಿತ್ತು. ಸಹೋದರಿ ಮದುವೆಯ ಸಿದ್ಧತೆಯಲ್ಲಿದ್ದರು. ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


