
ಬೆಳಗಾವಿ : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ; ತಗ್ಲಾಕೊಂಡವರ ಪರಿಸ್ಥಿತಿ ವೀಡಿಯೋ ನೋಡಿ…!

ಬೆಳಗಾವಿ : ಖಚಿತ ಮಾಹಿತಿ ಮೇರೆಗೆ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆದಿದ್ದು ಐವರು ಮಹಿಳೆಯರನ್ನು ರಕ್ಷಣೆ ಮಾಡಿದ್ದು 16 ಜನರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೆಳಗಾವಿ – ಪಣಜಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಆಮಂತ್ರಣ ಲಾಡ್ಜ್ ಮೇಲೆ ಖಾನಾಪುರ ಸಿಪಿಐ ಮಂಜುನಾಥ ನಾಯ್ಕ್ ನೇತೃತ್ವದ ತಂಡ ದಾಳಿ ನಡೆಸಲಾಗಿದ್ದು ವೇಶ್ಯಾವಾಟಿಕೆಯಲ್ಲಿ ನಿರತ 11 ಜನರನ್ನು ವಶಕ್ಕೆ ಪಡೆದಿದ್ದಾರೆ.
ಲಾಡ್ಜ್ ಮಾಲಿಕ ಲಾಡ್ಜ್ ಮಾಲಿಕ ವಿನಾಯಕ ಮಾಂಜರೇಕರ್ ವಿರುದ್ಧ ಐಟಿಪಿಎ ಅಡಿಯಲ್ಲಿ ದೂರು ದಾಖಲಾಗಿದೆ. ರಕ್ಷಣೆ ಮಾಡಿದ್ದ ಐವರು ಮಹಿಳೆಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.